ರಾಮನ ಭಾರತದಲ್ಲಿ ಪೆಟ್ರೋಲ್ 93 , ರಾವಣನ ಲಂಕಾದಲ್ಲಿ 51 ರೂಪಾಯಿ : ಕೇಂದ್ರ ಸರ್ಕಾರದ ವಿರುದ್ದ ಸುಬ್ರಮಣಿಯನ್ ಸ್ವಾಮಿ -Vishwanews24
ರಾಮನ ಭಾರತದಲ್ಲಿ ಪೆಟ್ರೋಲ್ 93 , ರಾವಣನ ಲಂಕಾದಲ್ಲಿ 51 ರೂಪಾಯಿ : ಕೇಂದ್ರ ಸರ್ಕಾರದ ವಿರುದ್ದ ಸುಬ್ರಮಣಿಯನ್ ಸ್ವಾಮಿ -Vishwanews24
ನವದೆಹಲಿ : ದೇಶದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆಯಾಗುತ್ತಿರುವ ವಿಚಾರದಲ್ಲಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ”ರಾವಣನ ಲಂಕಾದಲ್ಲಿ ಪೆಟ್ರೋಲ್ಗೆ 51 ರೂಪಾಯಿ, ಆದರೆ ರಾಮನ ಭಾರತದಲ್ಲಿ 93 ರೂಪಾಯಿ” ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ”ರಾಮನ ಭಾರತದಲ್ಲಿ ಪೆಟ್ರೋಲ್ 93, ಸೀತಾಳ ನೇಪಾಳದಲ್ಲಿ 53 ರೂಪಾಯಿ, ರಾವಣನ ಲಂಕಾದಲ್ಲಿ 51 ರೂಪಾಯಿ” ಎಂದು ಹೇಳಿದ್ದಾರೆ.
ಮಂಗಳೂರು : ಯೋಜನಾ ವಿಭಾಗದ ಜಂಟಿ ನಿರ್ದೇಶಕರ ಮನೆ ಮೇಲೆ ಎಸಿಬಿ ದಾಳಿ -Vishwanews24
ದೇಶದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಲ್ಲೇ ಇದ್ದು ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ಗೆ 86.30, ಡಿಸೇಲ್ಗೆ 76.48 ಇದೆ. ಮುಂಬೈನಲ್ಲಿ ಪೆಟ್ರೋಲ್ಗೆ 92.86 ಹಾಗೂ ಡಿಸೇಲ್ಗೆ 83.30 ಇದೆ.
— Subramanian Swamy (@Swamy39) February 2, 2021
