ರಾಷ್ಟ್ರೀಯ ಯೋಗ ಸಾಧಕಿ – 6 ನೇ ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದ ಉಡುಪಿಯ ಸನ್ನಿಧಿ – Vishwanews24
ರಾಷ್ಟ್ರೀಯ ಯೋಗ ಸಾಧಕಿ -ಯೋಗ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದ ಉಡುಪಿಯ ಸನ್ನಿಧಿ – Vishwanews24
ಉಡುಪಿ : ಇತ್ತೀಚೆಗೆ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ನಡೆದ 6 ನೇ ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್ ಶಿಪ್ ನಲ್ಲಿ ಉಡುಪಿಯ ಸನ್ನಿಧಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಎರ್ಮಾಳ್ ವಿದ್ಯಾ ಪ್ರಭೋದಿನಿ ಶಾಲೆಯಲ್ಲಿ ೧ ನೇ ತರಗತಿಯಲ್ಲಿ ಕಲಿಯುತ್ತಿರುವ ಇವರು, ಉಡುಪಿ ಗರ್ಡೆ ಲಕ್ಷ್ಮಿ ನಗರದ ಶಾರದಾ ಮತ್ತು ರವೀಂದ್ರ ಶೆಟ್ಟಿಗಾರ್ ದಂಪತಿಯ ಪುತ್ರಿ. ತಮ್ಮ ೬ ನೇ ವಯಸ್ಸಿನಲ್ಲಿ ಈ ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾರೆ.
