ರಾಷ್ಟ್ರೀಯ ಹೆದ್ದಾರಿ ೬೬ ಡಿವೈಡರ್ ನಡುವಿನ ವಾಹನ ಸಂಚಾರಕ್ಕೆ ಕಡಿವಾಣ ಹಾಕುವಂತೆ ಕಾಪು ಪುರಸಭಾ ಸದಸ್ಯ ಕಾಪು ಹರೀಶ್ ನಾಯಕ್ ಮನವಿ.

Featured, ಉಡುಪಿ

 ಕಾಪು :  ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ.ಹೆದ್ದಾರಿ ನಡುವೆ ಮಳೆ ನೀರು ಹರಿಯಲು ಬಿಟ್ಟ ಪ್ರದೇಶದಲ್ಲಿ ದ್ವಿಚಕ್ರ ಸವಾರರ ಬೇಜವಾಬ್ದಾರಿ ಚಾಲನೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಆ ಸ್ಥಳದಲ್ಲಿ ದ್ವಿಚಕ್ರ ವಾಹನಗಳು ಸಾಗಿಸದಂತೆ ಎರಡೂ ಕಡೆಗಳಲ್ಲಿ ಸಮರ್ಪಕವಾದ ಗ್ರಿಲ್ ಅಳವಡಿಸುವ ಕೆಲಸ ಇನ್ನೂ ನಡೆದಿಲ್ಲ.ಹಲವಾರು ಕಡೆಗಳಲ್ಲಿ 2 ಕಿಮೀ ದೂರದಲ್ಲಿ ತಿರುವು ನೀಡಲಾಗಿದ್ದು,ಬೈಕ್ ಸವಾರರು ಇಂದನ ಉಳಿಸಲು ಡಿವೈಡರ್ ನಡುವೆ ವಾಹನ ಸಾಗಿಸುವ ಮೂಲಕ ಅಪಘಾತಕ್ಕೀಡಾಗುತ್ತಾರೆ.ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ,ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ನವಯುಗ ಕಂಪನಿ ಹಾಗು ಹೆದ್ದಾರಿ ಇಲಾಖೆಯ ಗಮನಕ್ಕೆ ತಂದಿದ್ದು, ಡೈವರ್ಷನ್ ಹಂತರವನ್ನು ಕಡಿತಗೊಳಿಸಿ ಪ್ರತೀ 1 ಕಿಮೀ ಹಂತರದಲ್ಲಿ ಡೈವರ್ಷನ್ ನೀಡುವಂತೆ ಮನವಿಯನ್ನು ಸಲ್ಲಿಸಿದ್ದೇವೆ ಎಂದು ಕಾಪು ಪುರಸಭೆ ನಾಮ ನಿರ್ದೇಶನ ಸದಸ್ಯ ಹರೀಶ್ ಕೆ ನಾಯಕ್ ತಿಳಿಸಿದ್ದಾರೆ.