ರಾಹುಲ್ ಅವರಲ್ಲಿ ಹೋರಾಟದ ಮನೋಭಾವ ಇದೆ. ಮೋದಿಗಿಂತ ಹೆಚ್ಚು ಪ್ರಚಾರ ಅವರು ಮಾಡಿದ್ದಾರೆ : ಎಚ್.ಡಿ. ದೇವೇಗೌಡ -Vishwanews24
ಬೆಂಗಳೂರು, : ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದಾರೆ. ಅವರ ಮನಸ್ಸಿಗೆ ನೋವಾಗಿರಬಹುದು. ಹೀಗಾಗಿ ಪದತ್ಯಾಗ ಮಾಡಿರಬಹುದು. ಯಾರು ಏನೇ ಹೇಳಿದರೂ ರಾಹುಲ್ ಅವರಲ್ಲಿ ಹೋರಾಟದ ಮನೋಭಾವ ಇದೆ. ಮೋದಿಗಿಂತ ಹೆಚ್ಚು ಪ್ರಚಾರ ಅವರು ಮಾಡಿದ್ದಾರೆ. ಅವರು ಅಧ್ಯಕ್ಷ ಆದ ಮೇಲೆ ಹಲವಾರು ವಿಷಯ ಎತ್ತಿಕೊಂಡು ಹೋರಾಟ ಮಾಡಿದರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣ ಅಲ್ಲ. ಆದರೆ ಜನ ನರೇಂದ್ರ ಮೋದಿಗೆ ಆಶೀರ್ವಾದ ಮಾಡಿದರು. ಮೋದಿ ಅವರ ವರ್ಚಸ್ಸು ಕೆಳಗೆ ಹೋಗುತ್ತಿತ್ತು. ಪಕ್ಕದ ರಾಷ್ಟ್ರೀಯ ಮೇಲೆ ಯುದ್ದ ಮಾಡಿ ದೇಶ ರಕ್ಷಣೆ ಅಂತ ಮಾತನಾಡಿದ್ದಾರೆ. ಅದನ್ನ ಮಾಧ್ಯಮಗಳು ಹೆಚ್ಚು ತೋರಿಸಿದವರು ಇದರಿಂದ ಮೋದಿ ಪರ ಅಲೆ ಹೆಚ್ಚಾಯಿತು ಎಂದು ಹೇಳಿದರು.
ರಾಹುಲ್ ಗಾಂಧಿ ಯುವಕರಿದ್ದಾರೆ. ರಾಹುಲ್ ಟ್ವೀಟರ್ ನಲ್ಲಿ ರಾಜೀನಾಮೆ ಹಾಕಿರೋ ಬಗ್ಗೆ ಗೊತ್ತಿಲ್ಲ. ಎಂದು ತಿಳಿಸಿದರು.
