ರಾಹುಲ್ ಗಾಂಧಿ ಪಿಎ ಎಂದು ಕರೆ ಮಾಡಿ ಯು.ಟಿ. ಖಾದರ್ ಗೆ ವಂಚನೆಗೆ ಯತ್ನ : ಸೈಬರ್ ಕ್ರೈಂಗೆ ದೂರು – ಪ್ರಕರಣ ದಾಖಲು – VIshwanews24
ರಾಹುಲ್ ಗಾಂಧಿ ಪಿಎ ಎಂದು ಕರೆ ಮಾಡಿ ಯು.ಟಿ. ಖಾದರ್ ಗೆ ವಂಚನೆಗೆ ಯತ್ನ : ಸೈಬರ್ ಕ್ರೈಂಗೆ ದೂರು – ಪ್ರಕರಣ ದಾಖಲು
ಮಂಗಳೂರು: ರಾಹುಲ್ ಗಾಂಧಿ ಪಿಎ ಎಂದು ಹೇಳಿಕೊಂಡು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಗೆ ಕರೆ ಮಾಡಿ ವಂಚಿಸಲು ಯತ್ನಿಸಿರುವಂತಹ ಘಟನೆ ನಡೆದಿದೆ. ಅಪರಿಚಿತ ಸಂಖ್ಯೆಯಿಂದ ಯು.ಟಿ ಖಾದರ್ ಮೊಬೈಲ್ಗೆ 2 ಸಲ ಫೋನ್ ಮಾಡಿದ್ದಾರೆ.
ಯು.ಟಿ. ಖಾದರ್ ಅವರ ಸಮಯ ಪ್ರಜ್ಞೆಯಿಂದ ಮೋಸ ಹೋಗುವುದು ತಪ್ಪಿದೆ. ವಿಷಯ ಗೊತ್ತಾದ ತಕ್ಷಣ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ದೂರು ನೀಡಿದ್ದು, ಖಾದರ್ ಅವರಿಗೆ ವಂಚಿಸಲು ಯತ್ನಿಸಿದ ವ್ಯಕ್ತಿಯ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ಮಧ್ಯಾಹ್ನ ಯು.ಟಿ.ಖಾದರ್ ಅವರ ಮೊಬೈಲ್ ಗೆ 8146006626 ನಂಬರ್ನಿಂದ ಕರೆ ಬಂದಿತ್ತು. ಸಭೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ತಕ್ಷಣ ಅವರಿಗೆ ಕರೆ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಎರಡು ಬಾರಿ ಪೋನ್ ಕರೆ ಬಂದಿತ್ತು. ಸಭೆ ಮುಗಿಸಿ ಮೊಬೈಲ್ನ್ನು ಪರಿಶೀಲಿಸಿದಾಗ ‘Good afternoon this side Kaniskha Singh pa to sri rahul Gandhi ji call me’ ಎಂದು ಬರೆಯಲಾಗಿತ್ತು. ಈ ಮೊಬೈಲ್ ಸಂಖ್ಯೆಯನ್ನು ಎಐಸಿಸಿ ಕಾರ್ಯದರ್ಶಿ .ಕೆ.ಸಿ. ವೇಣುಗೋಪಾಲ್ ಹೆಸರಲ್ಲಿ ಸೇವ್ ಮಾಡಿರುವುದು ಟ್ರು ಕಾಲರ್ ಮೂಲಕ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.
