ಲಾಕ್-ಡೌನ್ –15000 ಸಾವಿರ ಮಂದಿಗೆ ಅನ್ನದಾನ-500 ಕುಟುಂಬಗಳಿಗೆ ಕಿಟ್ ವಿತರಿಸಿದ ಕೊರಂಗ್ರಪಾಡಿ ಶ್ರೀನಿವಾಸ್ ತಂತ್ರಿ ಮಡುಂಬು.VISHWANEWS24

Featured, ಉಡುಪಿ

ಲಾಕ್-ಡೌನ್ 15000 ಸಾವಿರ ಮಂದಿಗೆ ಅನ್ನದಾನ-500 ಕುಟುಂಬಗಳಿಗೆ ಕಿಟ್ ವಿತರಿಸಿದ ಕೊರಂಗ್ರಪಾಡಿ ಶ್ರೀನಿವಾಸ್ ತಂತ್ರಿ ಮಡುಂಬು.

ಕಾಪು: ಕೊರೋನಾ ಲಾಕ್-ಡೌನ್ ಸಮಸ್ಯೆಯಿಂದ ಜನರು ಹಸಿವಿನಿಂದ ಉಳಿಯಬಾರದು ಎಂಬ ದೃಷ್ಟಿಯಿಂದ ಸುಮಾರು 18 ದಿನಗಳಿಂದ ಹದಿನೈದು ಸಾವಿರಕ್ಕೂ ಅಧಿಕ ಜನರಿಗೆ ಅನ್ನದಾನ ಮತ್ತು 500 ಕ್ಕೂ ಅಧಿಕ ಕುಟುಂಬಗಳಿಗೆ ಕೊರಂಗ್ರಪಾಡಿ ಶ್ರೀನಿವಾಸ್ ತಂತ್ರಿ ಮಡುಂಬು ಆಹಾರದ ಕಿಟ್ ವಿತರಿಸಿದ್ದಾರೆ. ಕಾಪು ಕಾರ್ಕಳ ಪಾಂಗಾಳ ಇನ್ನಂಜೆ ಮಲ್ಲಾರು ಸೇರಿದಂತೆ ವಿವಿಧ ಭಾಗದ ಜನರಿಗೆ ಪ್ರತಿನಿತ್ಯ ಉತ್ತಮ ಗುಣಮಟ್ಟದ ರುಚಿ ಶುಚಿಯಾದ ಊಟ ತಯಾರಿಸಿ ಹಂಚ್ಚುವ ಕಾರ್ಯ ತಂತ್ರಿಯವರು ಮಾಡುತ್ತಿದ್ದಾರೆ .

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭಗವಂತನ ಕಾರ್ಯ ಎಂಬ ನಿಲುವಿನಿಂದ ಯಾವುದೇ ಪ್ರಚಾರದಲ್ಲಿ ಭಾಗಿಯಾಗದೇತನ್ನ ಸೇವೆ ಮುಂದುವರೆಸುತ್ತಿರುವುದು ಶ್ಲಾಘನೀಯವಾಗಿದೆ.

ಪ್ರತಿದಿನ ಊಟ ತಯಾರಿಸುವಲ್ಲಿ ಕಾಪು ಲಕ್ಷ್ಮೀ ಜನಾರ್ಧನ ದೇಗುಲದ ಪಾಕ ತಜ್ಞರಾದ ಶ್ರೀಧರ್ ಭಟ್ ಮತ್ತು ಕೆ.ಪಿ ಶ್ರೀನಿವಾಸ ತಂತ್ರಿಯವ ಧರ್ಮ ಪತ್ನಿ ದೀಕ್ಷಾ ಸೇರಿದಂತೆ ಕುಟುಂಬ ವರ್ಗದವರು ಹಾಗೂ ಶಿಷ್ಯಂದಿರು ಸಹಕಾರ ನೀಡುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮದ ಜತೆ ಮಾತಾಡಿದ ಅವರು” ಉಡುಪಿ ಅನ್ನಬ್ರಹ್ಮ ಕ್ಷೇತ್ರ ಹಾಗಾಗಿ ನನ್ನ ಗುರುಗಳ ಪ್ರೇರಣೆಯಿಂದ ನಮ್ಮ ಸುತ್ತಾ ಮುತ್ತ ಯಾರು ಕೂಡ ಹಸಿವಿನಿಂದ ಇರಬಾರದು ಹಾಗಾಗಿ ಕೋವಿಡ್೧೯ ನ ಲಾಕ್ ಡೌನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರತಿದಿನ ಅನ್ನದಾನ ಮಾಡುವ ಕಾರ್ಯ ಮಾಡುತ್ತಿದ್ದೇವೆ.ಇದು ಪ್ರಚಾರಕ್ಕಾಗಿ ಅಥಾವ ಹೆಸರಿಗೆ ಮಾಡುವುದಲ್ಲ ಜಾತಿ ಮತ ಭೇಧವಿಲ್ಲದೆ ಹಸಿವು ನೀಗಿಸಲು ಗುರುಗಳ ಮಾರ್ಗದರ್ಶನ ಪ್ರಕಾರ ನಮ್ಮದೊಂದು ಸೇವೆ ಮಾಡುತ್ತಿದ್ದೇವೆ ಅದರ ಜತೆಗೆ ಮಧ್ಯಮ ಮತ್ತು ಬಡ ಕುಟುಂಬಗಳಿಗೆ, ರಿಕ್ಷಾ ಚಾಲಕರಿಗೆ, ಆಹಾರ ಧಾನ್ಯದ ಕಿಟಗ ತಯಾರು ಮಾಡಿ ವಿತರಿಸುವ ಕಾರ್ಯ ನಡೆಯುತ್ತಿದೆ ಇದಕ್ಕೆ ಕೆಲವು ಆತ್ಮೀಯರು ೩೦೦ ಕೇಜಿ ಅಕ್ಕಿಯ ಸಹಕಾರ ಮಾಡಿದ್ದಾರೆ, ವೈಯಕ್ತಿಕವಾಗಿ ಸುಮಾರು ಅಂದಾಜು ಐದು ಲಕ್ಷ ರೂಪಾಯಿ ಖರ್ಚು ಇದುವರೆಗೆ ಆಗಿದೆ ಮುಂದಿನ ದಿನವೂ ಕೂಡ ಇದನ್ನು ಮುಂದುವರೆಸುತ್ತೇವೆ ಮತ್ತು ಇದು ಭಗವಂತನ ಸೇವೆ ಮಾಡುವ ಭಾಗ್ಯ ಎಂದರು.ವಿತರಣೆ ಮತ್ತು ಪ್ಯಾಕ್ ಮಾಡುವಲ್ಲಿ ಉಮೇಶ್ ಪೂಜಾರಿ ಹರೀಶ್ ಸೇರಿದಂತೆ ಗ್ರಾಮದ ಪರಿಸರದ ಯುವಕ ಯುವತಿಯರು ಕೈ ಜೋಡಿಸುತ್ತಿದ್ದಾರೆ.\

 

FACEBOOK VIDEO NEWS

YOUTUBE VIDEO NEWS