ಲಿಕ್ಕರ್ ಗಾಗಿ ಸ್ಲಿಪ್ಪರ್ ಇಟ್ಟು ಜಾಗ ರಿಸರ್ವ್ ಮಾಡಿದ ಮದ್ಯಪ್ರೀಯರು- vishwanews24

Featured

ಕಟಪಾಡಿ: ಇಂದಿನಿಂದ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಬಾಗಿಲು ತೆರೆಯುವ ಮುನ್ನವೇ ಉಡುಪಿ,ಕಟಪಾಡಿ,ಕಾಪು,ಪಡುಬಿದ್ರಿ ,ಇತರ ಭಾಗದಲ್ಲಿ ಮದ್ಯದಂಗಡಿ ಮುಂದೆ ಮದ್ಯಪ್ರಿಯರು ಕಾದು ಕುಳಿತಿದ್ದಾರೆ. ಅಲ್ಲದೆ ಹಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ್ದ ಬಾಕ್ಸ್‌ಗಳಲ್ಲಿ ಚಪ್ಪಲಿ ಇಟ್ಟು ಜಾಗವನ್ನು ರಿಸರ್ವ್ ಮಾಡಿದ್ದಾರೆ.

ವೈನ್ ಶಾಪ್ ಮುಂಭಾಗದಲ್ಲಿ ಸಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಬ್ಯಾರಿಗೇಟ್ ಅಳವಡಿಸಲಾಗಿದ್ದು ಮತ್ತೊಂದು ಕೆಲವು ಭಾಗಗಳಲ್ಲಿ ವಾಚ್ ಮ್ಯಾನ್ಗಳನ್ನು ನೇಮಿಸಲಾಗಿದೆ.