ಲೋಕಸಭಾ ಚುನಾವಣೆ : ಫೆಬ್ರವರಿ ಕೊನೆಯಲ್ಲಿ ರಾಜ್ಯದ ಬಿಜೆಪಿ  ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ – Vishwanews24

Featured, ರಾಜ್ಯ ನ್ಯೂಸ್

ಲೋಕಸಭಾ ಚುನಾವಣೆ : ಫೆಬ್ರವರಿ ಕೊನೆಯಲ್ಲಿ ರಾಜ್ಯದ ಬಿಜೆಪಿ  ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಬೆಂಗಳೂರು: ಲೋಕಸಭಾ ಚುನಾವಣೆಗೆ  ಕೇವಲ ತಿಂಗಳು ಬಾಕಿ ಇರುವಾಗಲೇ ಫೆಬ್ರವರಿ ಕೊನೆಯಲ್ಲಿ ರಾಜ್ಯದ ಬಿಜೆಪಿ  ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

14- 16 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಈ ಪಟ್ಟಿಯಲ್ಲಿ ಬಹುತೇಕ ಹಾಲಿಗಳಿಗೆ ಟಿಕೆಟ್‌ ಸಿಗಲಿದೆ. ಬಿಜೆಪಿ ಲೋಕಸಭೆ ತಯಾರಿ ಮಧ್ಯೆ ಮೊದಲ ಪಟ್ಟಿ ಪ್ರಕಟಿಸುವ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಸುಳಿವು ನೀಡಿದ್ದಾರೆ.

ಗೆಲುವು ಸ್ಪಷ್ಟ ಇರುವ ಕ್ಷೇತ್ರಗಳ ಅಮಿತ್ ಶಾ ವರದಿ ಪಡೆದಿದ್ದು ಮೊದಲ ಪಟ್ಟಿಯಲ್ಲಿ ಬಹುತೇಕ ಗೆಲ್ಲುವ ಹಾಲಿ ಸಂಸದರಿಗೆ ಟಿಕೆಟ್ ಸಿಗಲಿದೆ. ಹೊಸ ಮುಖ, ಅಚ್ಚರಿ ಅಭ್ಯರ್ಥಿ ಹೆಸರು ಎರಡು ಮತ್ತು ಮೂರನೇ ಪಟ್ಟಿಯಲ್ಲಿ ಪ್ರಕಟವಾಗಲಿದೆ.

ಕಾರ್ಕಳ: ಹೃದಯಾಘಾತ – ಸಮಾರಂಭದಲ್ಲಿಯೇ ಕುಸಿದು ಬಿದ್ದು ಛಾಯಾಗ್ರಾಹಕ ಮೃತ್ಯು – Vishwanews24

ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೊನೆ ಗಳಿಗೆಯಲ್ಲಿ ಕೆಲ ಕ್ಷೇತ್ರಗಳಿಗೆ ಟಿಕೆಟ್‌ ಪ್ರಕಟಿಸಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಿತ್ತು. ಸೋಲಿನ ಬಳಿಕ ನಡೆದ ಆತ್ಮಾವಲೋಕನ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿತ್ತು. ಈ ಕಾರಣಕ್ಕೆ ಈ ಬಾರಿ ಬಹಳ ಬೇಗ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬೇಗ ಬಿಡುಗಡೆಯಾಗಲಿದೆ.

Leave a Reply