ಲೋಕಸಭಾ ಚುನಾವಣೆ : ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ : ಖ್ಯಾತ ಚುನಾವಣಾ ತಜ್ಞ ಸಂಜಯ್ ಕುಮಾರ್ -Vishwanews24
ನವದೆಹಲಿ :ಲೋಕಸಭಾ ಚುನಾವಣೆಗೆ ಇನ್ನೂ 59 ಕ್ಷೇತ್ರಗಳಿಗೆ ಮತದಾನ ನಡೆಯೋದು ಬಾಕಿಯಿದೆ. ಯಾರು ಅಧಿಕಾರದ ಕುರ್ಚಿ ಹಿಡಿಯುತ್ತಾರೆ ಅನ್ನೋ ಕುತೂಹಲ ಎಲ್ಲೆಡೆ ಮನೆಮಾಡಿದೆ. ಈ ಚರ್ಚೆ ಮಧ್ಯೆ ಬಿಜೆಪಿ ಈ ಬಾರಿ ಅತೀ ಹೆಚ್ಚು ಸ್ಥಾನ ಪಡೆಯುತ್ತೆ ಎಂದು ಖ್ಯಾತ ಚುನಾವಣಾ ತಜ್ಞ ಸಂಜಯ್ ಕುಮಾರ್ ಹೇಳಿದ್ದಾರೆ.
ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆಯಲಿದೆ. ಜೊತೆಗೆ ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಗಳಿಸುವತ್ತ ಸಾಗುತ್ತದೆ. ಆದ್ರೆ ಕಾಂಗ್ರೆಸ್ 100 ಸ್ಥಾನ ಗಳಿಸುವುದು ಸಹ ಡೌಟ್. 75 ರಿಂದ 80 ಸ್ಥಾನ ಮಾತ್ರ ‘ಕೈ’ ಪಕ್ಷದ ಪಾಲಾಗಲಿದೆ ಅಂತಾ ಇವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಈ ಬಾರಿ ಬಿಜೆಪಿಗೆ ಉತ್ತಮ ಫಲಿತಾಂಶ ಲಭಿಸಲಿದ್ದು, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ,ಹಿಮಾಚಲ ಪ್ರದೇಶ, ಉತ್ತರಾಖಂಡ್ ಹಾಗೂ ದೆಹಲಿಯಲ್ಲಿ 2014ರಲ್ಲಿ ಗಳಿಸಿದ್ದಷ್ಟು ಸ್ಥಾನವನ್ನು ಈ ಬಾರಿ ಪಡೆಯುವುದಿಲ್ಲ ಎಂದು ಸಂಜಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
