ಲೋಕಸಭೆ ಚುನಾವಣೆ ಗೆಲ್ಲಲು ಪುಲ್ವಾಮಾ ಉಗ್ರ ದಾಳಿಯನ್ನು ಮೋದಿ ಸರ್ಕಾರವೇ ಮಾಡಿಸಿರಬಹುದು : ಎಸ್ಪಿ ನಾಯಕ – Vishwanews24
ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಮತಗಳಿಸಲು ಮೋದಿ ಸರಕಾರ ಪುಲ್ವಾಮಾ ದಾಳಿಯನ್ನು ಪ್ಲಾನ್ ಮಾಡಿತ್ತು ಎಂದು ಸಮಾಜವಾದಿ ಪಕ್ಷದ ನಾಯಕ ರಾಮ್ಗೋಪಾಲ್ ಯಾದವ್ ಶಾಕಿಂಗ್ ಆರೋಪ ಮಾಡಿದ್ದಾರೆ.
ಮತಗಳನ್ನು ಗೆಲ್ಲಲು ಎನ್ಡಿಎ ಸರಕಾರ ಪುಲ್ವಾಮಾ ದಾಳಿಯನ್ನು ಪ್ಲಾನ್ ಮಾಡಿತ್ತು ಎಂದು ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದಾರೆ. ಅಲ್ಲದೆ, ಮತಗಳಿಗೋಸ್ಕರ ಸೈನಿಕರು ತಮ್ಮ ಜೀವವನ್ನೇ ತ್ಯಾಗ ಮಾಡಿರುವುದು ತನಗೆ ತೀವ್ರ ಬೇಸರ ತಂದಿದೆ ಎಂದೂ ಹೇಳಿಕೊಂಡಿದ್ದಾರೆ. ಜತೆಗೆ, ಜಮ್ಮು – ಶ್ರೀನಗರ ಹೆದ್ದಾರಿಯಲ್ಲಿ ಭದ್ರತಾ ನಿರ್ಬಂಧಗಳಿಲ್ಲದಿರುವುದು ಹೇಗೆ ಸಾಧ್ಯ ಎಂದೂ ಸಮಾಜವಾದಿ ಪಕ್ಷದ ನಾಯಕ ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ, ಪ್ಯಾರಾಮಿಲಿಟರಿ ಪಡೆಯ ಹಿರಿಯ ಅಧಿಕಾರಿಗಳು ವಿಮಾನದಲ್ಲಿ ಅಥವಾ ಶಸ್ತ್ರಸಜ್ಜಿತ ವಾಹನಗಳಲ್ಲಿ ಪ್ರಯಾಣ ಮಾಡಬೇಕೆಂದು ಕೇಂದ್ರ ಸರಕಾರವನ್ನು ಮನವಿ ಮಾಡಿಕೊಂಡರೂ ಸಹ ಸಾಮಾನ್ಯ ಬಸ್ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು ಎಂದೂ ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದಾರೆ.
