ವಂಚನೆ ಪ್ರಕರಣ : ನಾನು ಖಂಡಿತವಾಗಿಯೂ ಪಕ್ಷಕ್ಕೆ ೮ ಕೋಟಿ ರೂ.ಗಳನ್ನು ವಂಚಿಸಿಲ್ಲ : ಸಂಸದೆ ರಮ್ಯಾ – Vishwanews24
ನಾನು ಓಡಿಹೋಗಲಿಲ್ಲ, ವೈಯಕ್ತಿಕ ಕಾರಣಗಳಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ..
ಬೆಂಗಳೂರು: ಕಾಂಗ್ರೆಸ್ಗೆ ಎಂಟು ಕೋಟಿ ರೂ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಮೇಲೆ ಕೇಳಿ ಬರುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ನಟಿ, ಮಾಜಿ ಸಂಸದೆ ರಮ್ಯ ಅವರು ಸ್ಪಷ್ಟೀಕರಣ ವನ್ನು ಟ್ವಿಟರ್ನಲ್ಲಿ ಹೇಳಿದ್ದಾರೆ.
After I quit, ‘she duped the congress of 8 crores & ran away’ was planted in the news esp Kannada channels in an attempt to destroy my credibility. I didn’t run away. I resigned for personal reasons. I certainly did not dupe the party of 8 crores. My mistake was staying silent-
— Divya Spandana/Ramya (@divyaspandana) May 12, 2022
ನಾನು ರಾಜೀನಾಮೆ ನೀಡಿದ ನಂತರ, ‘ಅವರು ಕಾಂಗ್ರೆಸ್ಸಿಗೆ 8 ಕೋಟಿ ವಂಚಿಸಿ ಓಡಿಹೋದರು’ ಎಂದು ನನ್ನ ವಿಶ್ವಾಸಾರ್ಹತೆಯನ್ನು ನಾಶಪಡಿಸುವ ಪ್ರಯತ್ನದಲ್ಲಿ ಕನ್ನಡ ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡಲಾಯಿತು . ನಾನು ಓಡಿಹೋಗಲಿಲ್ಲ. ವೈಯಕ್ತಿಕ ಕಾರಣಗಳಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ನಾನು ಖಂಡಿತವಾಗಿಯೂ ಪಕ್ಷಕ್ಕೆ ೮ ಕೋಟಿ ರೂ.ಗಳನ್ನು ವಂಚಿಸಿಲ್ಲ. ನನ್ನ ತಪ್ಪು ಮೌನವಾಗಿರುವುದು ಅವರು ಹೇಳಿದ್ದಾರೆ.
