ವಿಘ್ನವಿನಾಶಕನಾದ ಗಣೇಶನ ನೂರೆಂಟು(108) ಹೆಸರುಗಳು ಮತ್ತು ಹೆಸರಿನ ಅರ್ಥ -vishwanews24
ವಿಘ್ನವಿನಾಶಕನಾದ ಗಣೇಶನ ನೂರೆಂಟು(108) ಹೆಸರುಗಳು ಮತ್ತು ಹೆಸರಿನ ಅರ್ಥ -vishwanews24
1) ಅಖುರಥ – ಇಲಿಯನ್ನು ತನ್ನ ವಾಹನವಾಗಿರಿಸಿಕೊಂಡವ
2) ಆಲಂಪತ- ಎಂದಿಗೂ ಅನಂತನಾದ ದೇವ
3) ಅಮಿತ – ಕೊನೆಯಿಲ್ಲದ ದೇವ
4) ಅನಂತಚಿದೃಪಮಯಂ – ಅನಂತ ಜ್ಞಾನ ಉಳ್ಳವ
5) ಅವನೀಶ್ – ಭೂಮಿಯ ಒಡೆಯ
6) ಅವಿಘ್ನ – ವಿಘ್ನ ನಿವಾರಕ
7) ಬಾಲಗಣಪತಿ- ಪ್ರೀತಿ, ಆತ್ಮೀಯತೆಯಿಂದ ಮುದ್ದಿಸಲ್ಪಡುವವ, ಬಾಲಕ ಗಣಪತಿ
8) ಬಾಲಚಂದ್ರ -ಚಂದ್ರನಿಂದಲಂಕೃತನಾದವ
9) ಭೀಮ – ಸ್ಥೂಲಕಾಯದ ದೇಹಧಾರ್ಢ್ಯ ಉಳ್ಳವ
10) ಭೂಪತಿ- ಭೂಮಿಗೆ ಯಜಮಾನ
11) ಭುವನಪತಿ – ಜಗತ್ತಿನ ಒಡೆಯ
12) ಬುದ್ದಿನಾಥ – ಬುದ್ದಿಯನ್ನು, ಜ್ಞಾನವನ್ನು ದಯಪಾಲಿಸುವವನು
13) ಬುದ್ಧಿಪ್ರಿಯ – ಬುದ್ದಿವಂತ, ಜ್ಞಾನವಂತ
14) ಬುದ್ಧಿವಿಧಾತ – ಜ್ಞಾನದ ದೇವತೆ
15) ಚತುರ್ಭುಜ – ನಾಲ್ಕು ಕೈಗಳುಳ್ಳವನು
16) ದೇವದೇವ -ದೇವತೆಗಳ ದೇವ
17) ದೇವಾಂತಕನಾಶಕ – ರಾಕ್ಷಸರನ್ನು, ಅಸುರರನ್ನು ನಾಶಪಡಿಸುವವನು
18) ದೇವವ್ರತ – ಭಕ್ತರ ಪ್ರಾಯಶ್ಚಿತ್ತಗಳನ್ನು ಒಪ್ಪಿಕೊಳ್ಳುವ ದೇವತೆ
19) ದೇವೇಂದ್ರಶಿಖಾ -ದೇವತೆಗಳ ಹಿತರಕ್ಷಣೆ ಮಾಡುವವ
20) ಧಾರ್ಮಿಕ- ಧರ್ಮ ನಿರತನಾದವ
21) ಧೂಮ್ರವರ್ಣ- ಧೂಮ್ರ ಬಣ್ಣದ ದೇವತೆ
22) ದುರ್ಜ -ಅದ್ವಿತೀಯ, ಅಜೇಯ ದೇವತೆ
23) ದ್ವೈಮಾತುರ- ಇಬ್ಬರು ತಾಯಂದಿರನ್ನು ಉಳ್ಳವ
24) ಏಕಾಕ್ಷರ – ಒಂದು ಅಕ್ಷರದವ
25) ಏಕದಂತ – ಒಂದು ದಂತ (ಹಲ್ಲು) ಉಳ್ಳವ
26) ಏಕದೃಷ್ಟ -ಒಂದು ದಂತ (ಹಲ್ಲು) ಉಳ್ಳವ
27) ಈಶಪುತ್ರ – ಈಶ್ವರನ ಪುತ್ರ
28) ಗದಾಧರ – ಗದೆಯನ್ನು ಆಯುಧವನ್ನಾಗಿ ಉಪಯೋಗಿಸುವವ
29) ಗಜಕರ್ಣ- ಆನೆಯ ಕಣ್ಣುಗಳನ್ನು ಹೊಂದಿರುವವ
30) ಗಜಾನನ – ಆನೆಯ ಮುಖವನ್ನು ಹೊಂದಿರುವವ
31) ಗಜನನೇತಿ – ಆನೆಯ ಮುಖದ ತರಹದ ಮುಖವನ್ನು ಹೊಂದಿರುವವ
32) ಗಜವಕ್ರ – ಆನೆಯ ಸೊಂಡಿಲುಳ್ಳವ
33) ಗಜವಕ್ತ್ರ – ಆನೆಯ ಬಾಯಂತೆ ಬಾಯನ್ನು ಉಳ್ಳವ
34) ಗಣದಕ್ಷಯ (ಗಣನಾಯಕ)- ಗಣಗಳಿಗೆಲ್ಲಾ(ದೇವತೆಗಳು) ಅಧಿನಾಯಕ
35) ಗಣಧ್ಯಕ್ಷಿನ – ಗಣಗಳಿಗೆಲ್ಲಾ(ದೇವತೆಗಳು) ಅಧ್ಯಕ್ಷ
36)ಗಣಪತಿ- ಗಣನಾಯಕ, ದೇವತೆಗಳಿಗೆಲ್ಲಾ ಒಡೆಯ
37) ಗೌರಿಸುತ – ಗೌರಿಯ ಪುತ್ರ
38) ಗುಣಿನ- ಸರ್ವ ಜ್ಞಾನ ಉಳ್ಳವನು
39) ಹರಿದ್ರ – ಬಂಗಾರದ ಬಣ್ಣದ ಮೈ ಉಳ್ಳವನು
40) ಹೇರಂಬಾ- ತಾಯಿಯ ಮುದ್ದಿನ ಮಗ
41) ಕಪಿಲಾ- ಹಳದಿಮಿಶ್ರಿತ ಕಂದುಬಣ್ಣದ ಮೈ ಉಳ್ಳವ
42) ಕವೀಶ -ಕವಿಗಳಿಗೆಲಾ ಒಡೆಯ
43) ಕೃತಿ- ಸಂಗೀತದ ದೇವತೆ
44) ಕೃಪಾಳು- ಕರುಣಾಳಾದ ದೇವತೆ
45) ಕೃಷಪಿಂಗಾಕ್ಷ – ಹಳದಿಮಿಶ್ರಿತ ಕಂದುಬಣ್ಣದ ಕಣ್ಣುಗಳುಳ್ಳವ
46) ಕ್ಷಮಾಕರಂ- ಕ್ಷಮೆಯನ್ನು ದಯಪಾಲಿಸುವವ
47) ಕ್ಷಿಪ್ರ – ಸರಳವಾಗಿ, ಸುಲಭವಾಗಿ ಭಕ್ತರಿಗೆ ಒಲಿಯುವವ
48) ಲಂಬಕರ್ಣ- ಉದ್ದನೆಯ ಕಿವಿಗಳುಳ್ಳವ
49) ಲಂಬೋದರ – ಉದ್ದನೆಯ ಹೊಟ್ಟೆಯನ್ನುಳ್ಳವ
50) ಮಹಾಬಲ – ಅತ್ಯಂತ ಬಲಶಾಲಿಯಾದ ದೇವತೆ
51) ಮಹಾಗಣಪತಿ – ಸರ್ವಾಧಿಕಾರಿ, ಸರ್ವೋಚ್ಛ ದೇವತೆ
52) ಮಹೇಶ್ವರಂ- ಮಹಾ ಈಶ್ವರನ ಸಮಾನರಾದವ
53)ಮಂಗಳಮೂರ್ತಿ- ಮಂಗಳಕರನಾದ ದೇವತಾ ಮೂರ್ತಿ
54) ಮನೋಮಯಿ -ಮನಸ್ಸನ್ನು ಗೆಲ್ಲುವವನು
55) ಮೃತ್ಯುಂಜಯ- ಸಾವನ್ನು ಗೆದ್ದವನು
56) ಮುಂದಾಕರಮ- ಸಂತಸವನ್ನು ಮನೆ ಮಾಡಿಕೊಂಡಿರುವವ
57) ಮುಕ್ತಿದಾಯ – ಮುಕ್ತಿಯನ್ನು ದಯಪಾಲಿಸುವವ
58) ಮೂಷಿಕವಾಹನ- ಇಲಿಯನ್ನು ತನ್ನ ವಾಹನವಾಗಿರಿಸಿಕೊಂಡವ
59) ನಾದಪ್ರತಿಥಿಷ್ಟ- ನಾದ ಸುಧೆಯನ್ನು ಆಸ್ವಾಧಿಸುವವ, ಮೆಚ್ಚುವವ
60) ನಮಸ್ತೇತು – ದುಷ್ಟಶಕ್ತಿಗಳನ್ನು, ದುಷ್ಟ ವಿಚಾರಗಳನ್ನು ನಿರ್ಮೂಲನ ಮಾಡುವವ
61) ನಂದನ- ಶಿವನ ಮಗ
62) ನಿಧೀಶ್ವರಂ- ಆಯುರಾರೋಗ್ಯಐಶ್ವರ್ಯವನ್ನು ದಯಪಾಲಿಸುವವ
63) ಓಂಕಾರ- ಓಂಕಾರ ಸ್ವರೂಪಿಯಾದವನು
64) ಪೀತಾಂಬರ- ಹಳದಿಬಣ್ಣದ ಮೈ ಉಳ್ಳವನು
65) ಪ್ರಮೋದ- ಮೋದಕಪ್ರಿಯ, ಮೋದಕಗಳ ಒಡೆಯ
66) ಪ್ರಥಮೇಶ್ವರ- ಎಲ್ಲಾ ಕಡೆ ಮೊದಲಾಗಿರುವವನು, ಪ್ರಥಮ ಪೂಜೆಯ ದೇವತೆ
67) ಪುರುಷ್- ಅಪ್ರತಿಮ ಪುರುಷ ವ್ಯಕ್ತಿತ್ವ ಉಳ್ಳವನು
68) ರಕ್ತ – ರಕ್ತದಂತೆ ಕೆಂಪಗಿನ ಕಣ್ಣುಗಳುಳ್ಳವನು
69) ರುದ್ರಪ್ರಿಯ-ಶಿವನಿಗೆ ಪ್ರಿಯನಾದವನು
70) ಸರ್ವದೇವಾತ್ಮನ್-ಸರ್ವಕಾಣಿಕೆಗಳನ್ನ,ಪೂಜೆಗಳನ್ನು, ಒಪ್ಪಿಸಿಕೊಳ್ಳುವವನು
71 )ಸರ್ವಸಿದ್ಧಾಂತ – ವಿದ್ಯೆ,ಬುದ್ದಿ, ಜ್ಞಾನವನ್ನುಸಿದ್ದಿಸುವವನು
72) ಸರ್ವಾತ್ಮನ್-ಜಗತ್ತನ್ನು ಸಂರಕ್ಷಿಸುತ್ತಿರುವವನು
73) ಶಾಂಭವಿ-ಶಾಂಭವಿಯಾದ ತಾಯಿ ಪಾರ್ವತಿಯ, ಮಗನು
74) ಶಶಿವರ್ಣಂ- ಬೆಳದಿಂಗಳಬೆಳಕಿನಂತಿರುವವನು, ಚಂದ್ರನ ಬಣ್ಣವುಳ್ಳವನು
75) ಶೂರ್ಪಕರ್ಣ-ಬೃಹದಾಕಾರದ ಕಿವಿಗಳುಳ್ಳವನು
76) ಶುಭನ್- ಶುಭದಾಯಕನಾದ ದೇವತೆಯು
77)ಶುಭಗುಣಕಣನ್-ಸರ್ವಕಾಯ, ಸರ್ವವಿಧಿಯನ್ನು ಬಲ್ಲವ
78) ಶ್ವೇತ-ಬಿಳಿಯ ಬಣ್ಣದಂತೆ ಶುಭ್ರವಾಗಿ, ಪವಿತ್ರವಾಗಿರುವವನು
79) ಸಿದ್ದಿದಾತ-ಕೀರ್ತಿಯಶಸ್ಸನ್ನು ದಯಪಾಲಿಸುವವ
80) ಸಿದ್ದಿಪ್ರಿಯ-ಸದಾಕಾಲ ಆಶೀರ್ವಾದವನ್ನು ಸಿದ್ದಿಸುವವ
81)ಸಿದ್ದಿವಿನಾಯಕ- ಯಶಸ್ಸಿನ ಅಧಿದೇವತೆ, ಯಶಸ್ಸನ್ನು ಕರುಣಿಸುವವ
82) ಸ್ಕಂದಪೂರ್ವಜ-ಸುಬ್ರಹ್ಮಣ್ಯನ ಅಣ್ಣ
83) ಸುಮುಖ-ಪವಿತ್ರವಾದ, ಸ್ತುತ್ಯಾರ್ಹ ಮುಖವನ್ನುಳ್ಳವ
84) ಸುರೇಶ್ವರಂ-ಸುರದೇವತಿಗಳಿಗೆಲ್ಲಾ ಒಡೆಯನಾದವ
85) ಸ್ವರೂಪ್ – ರೂಪವಂತನೂ, ಸುಂದರವದನ ಉಳ್ಳವನು
86) ತರುಣ್-ಸದಾಕಾಲ ತರುಣಂತೆಯೇ ಇರುವವ
87) ಉದ್ದಂಡ-ದುಷ್ಟಶಕ್ತಿಗಳಿಗೆ, ದುರ್ಜನರಿಗೆ ಶಾಪವನ್ನು ನೀಡುವವನು, ದುಷ್ಟ ಶಿಕ್ಷಕ
88) ಉಮಾಪುತ್ರ-ಪಾರ್ವತಿಯ ಮಗ
89) ವಕ್ರತುಂಡ-ಬಾಗಿದ ಸೊಂಡಿಲುಳ್ಳ ದೇವತೆ
90) ವರಗಣಪತಿ-ಬೇಡಿದ ವರ ನೀಡುವ ದೇವತೆ
91) ವರಪ್ರದ-ವರಗಳನ್ನು ದಯಪಾಲಿಸುವವ
92)ವರದವಿನಾಯಕ- ಯಶಸ್ಸಿನ್ನು ಹರಸಿ ವರವನ್ನೀಯುವವ
93) ವೀರಗಣಪತಿ-ವೀರನಾದ ಗಣೇಶ ದೇವತೆ
94)ವಿದ್ಯಾವಾರಿಧಿ-ವಿದ್ಯೆಯ ಅಧಿದೇವತೆ
95) ವಿಘ್ನಹರ-ವಿಘ್ನಗಳನ್ನು ಹರಿಸುವವನು
96) ವಿಘ್ನಹರ್ತ-ವಿಘ್ನಗಳನ್ನು ನಾಶಪಡಿಸುವವನು
97) ವಿಘ್ನರಾಜ-ವಿಘ್ನಗಳನ್ನೆಲ್ಲಾ ಜಯಿಸಿ, ಅದರ ಒಡೆಯನಾಗಿರುವವನು
98)ವಿಘ್ನರಾಜೇಂದ್ರ- ವಿಘ್ನಗಳನ್ನೆಲ್ಲಾಜಯಿಸಿ,ವಿಘ್ನಗಳ ರಾಜನಾಗಿರುವವನು
99)ವಿಘ್ನವಿನಾಶಾನಯ-ವಿಘ್ನಗಳನ್ನು ಸರ್ವನಾಶ ಮಾಡುವವನು
100) ವಿಘ್ನೇಶ್ವರ-ವಿಘ್ನನಿವಾರಕ, ನಿಘ್ನಗಳಿಂದ ಕಾಪಾಡುವವನು
101) ವಿಕತ್- ಬೃಹದಾಕಾರದ ದೇಹವುಳ್ಳವನು
102) ವಿನಾಯಕ-ಸರ್ವರಿಗೂ ನಾಯಕನಾದವನು
103) ವಿಶ್ವಮುಖ- ಜಗತ್ತಿಗೇ ಮುಖದಂತಿರುವವನು
104) ವಿಶ್ವರಾಜ-ಪ್ರಪಂಚದೊಡೆಯ
105) ಯಜ್ಞಕಾಯ-ಯಜ್ಞಗಳಲ್ಲಿ ಸಲ್ಲಿಸುವ ಭಕ್ತಿಸಮರ್ಪಣೆಗಳನ್ನು ಸ್ವೀಕರಿಸುವವನು
106) ಯಶಸ್ಕರಂ- ಯಶಸ್ಸನ್ನು, ಅದೃಷ್ಟವನ್ನು, ಸಿದ್ದಿಸುವವನು
107)ಯಶಸ್ವಿನ್-ಅತ್ಯಂತ ಪ್ರೀತಿದಾಯಕನಾದ, ಅತ್ಯಂತ ಜನಪ್ರಿಯನಾದ ದೇವತೆಯು
108) ಯೋಗದೀಪ- ಯೋಗಕಾರಕನೂ, ಯೋಗದ ಅಧಿದೇವತೆಯೂ ಆದವನು
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
