ವಿದ್ಯಾಪ್ರಸಾರ ವಿದ್ಯಾಮಂದಿರ ಹೆಜಮಾಡಿ ಕೋಡಿ : ಶಾಲಾ ವಾರ್ಷಿಕೋತ್ಸವ ಸಂಭ್ರಮ.

Featured, ಉಡುಪಿ

ವಿದ್ಯಾಪ್ರಸಾರ ವಿದ್ಯಾಮಂದಿರ ಹೆಜಮಾಡಿ ಕೋಡಿ , ಶಾಲಾ ವಾರ್ಷಿಕೋತ್ಸವ ಸಂಭ್ರಮ.

ಕಾಪು: ಹೆಜಮಾಡಿ ಕೋಡಿ ಗ್ರಾಮದಲ್ಲಿರುವ ಪ್ರಖ್ಯಾತ ಶಾಲೆ ವಿದ್ಯಾ ಪ್ರಸಾರ ವಿದ್ಯಾಮಂದಿರದ ಶಾಲಾ ವಾರ್ಷಿಕೋತ್ಸವ ಶುಕ್ರವಾರದಂದು ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಇನ್ಫೋಸಿಸ್ ಮಂಗಳೂರು ಇದರ ಸೀನಿಯರ್ ಮೇನೆಜರ್ ಶಶಿಕಲಾ ಜನಾರ್ಧನ ಮಾತನಾಡಿ
ಪ್ರಾಥಮಿಕ ಶಾಲೆಯಿಂದಲೇ ಶಿಕ್ಷಕರ ಸಹಕಾರದೊಂದಿಗೆ ಇವತ್ತಿನ‌ ಮಕ್ಕಳು‌ ಮುಂದಿನ‌ಜನತೆ ಎಂಬುದನ್ನ ಸಾಬೀತು ಪಡಿಸಬೇಕಾದರೇ ಸಣ್ಣ ತರಗತಿಯಿಂದಲೇ ಒಬ್ಬರನ್ನೊಬ್ಬರು ಗೌರವಿಸುತ್ತ ಬೆಳೆಯಬೇಕು ಅದರ ಜತೆಗೆ ಪರಿಸರದ ಕಾಲಜಿಯನ್ನ ಕೂಡ ಮೈಗೂಡಿಸಿಕೊಂಡು ಬೆಳೆಯಬೇಕು ಮಕ್ಕಳೊಂದಿಗೆ ಪೋಷಕರು ಕೂಡ ನಮ್ಮ‌ಶಾಲೆ ನಮ್ಮ‌ ಊರು ಎಂಬ ಭಾವನೆ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.
,ಅತಿಥಿಗಳಾಗಿ ರವೀಂದ್ರ ಪುತ್ರನ್ ,ವಿನೋದ್ ಕೋಟ್ಯಾನ್, ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ ಇದರ ಆಡಳಿತ ಮೊಕ್ತೆಸರರಾದ ಹಾಗೂ ಉದ್ಯಮಿ ದಯಾನಂದ್ ಹೆಜಮಾಡಿ,ಜಯಶೀಲ ಬಂಗೇರ ,ಬೋಜರಾಜ ಕರ್ಕೇರ ಶ್ರೀನಿವಾಸ್ ಕೋಟ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾ ಸ್ಪರ್ಧೆ, ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿಜೇತರಿಗೆ ಅತಿಥಿಗಳು ಬಹುಮಾನ ನೀಡಿ‌ ಗೌರವಿಸಿದರು.
ತದನಂತ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.