ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ ; ಭಾರತ ತಂಡ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಲಿದೆ : ಸಿದ್ದರಾಮಯ್ಯ -Vishwanews24
ಬೆಂಗಳೂರು: ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ 2 ಪಂದ್ಯಗಳು ಇಂದು ನಡೆಯಲಿದ್ದು, ಭಾರತ ತಂಡ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಅವರ ಈ ಕ್ರಿಕೆಟ್ ಪ್ರೀತಿ ವಿಶ್ವಕಪ್ ಟೂರ್ನಿಯಲ್ಲೂ ಮುಂದುವರಿದಿದ್ದು, ಈ ಬಾರಿ ಭಾರತ ತಂಡ ವಿಶ್ವಕಪ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಈ ಬಾರಿ ಸೆಮಿಫೈನಲ್ನಲ್ಲಿ ಎಲ್ಲಾ ಬಲಿಷ್ಠ ತಂಡಗಳಿದ್ದು, ಭಾರತ ತಂಡ ಅತ್ಯುತಮ ನಿರ್ವಹಣೆ ತೋರಲಿದೆ. ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಕೊಹ್ಲಿ ನನಗೆ ಮಾತ್ರ ಅಲ್ಲ ಎಲ್ಲರಿಗೂ ನೆಚ್ಚಿನ ಆಟಗಾರ ಎಂದು ಸಿದ್ದರಾಮಯ್ಯ ತಿಳಿಸಿದರು.
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಂಗ್ರಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿವೆ. ಇಂದು ಈ ಎರಡು ತಂಡಗಳ ಫಲಿತಾಂಶ ಸೆಮಿಫೈನಲ್ನಲ್ಲಿ ಈ ತಂಡಗಳು ಎದುರಿಸುವ ತಂಡವನ್ನು ನಿರ್ಧರಿಸಲಿದೆ.
