ವಿಶೇಷ ರೀತಿಯಲ್ಲಿ ಗುರುಜಯಂತಿ ಕಾರ್ಯಕ್ರಮ ಆಚರಿಸಿದ ಕಾಪು ಯುವ ವಾಹಿನಿ ಘಟಕ
ವಿಶೇಷ ರೀತಿಯಲ್ಲಿ ಗುರುಜಯಂತಿ ಕಾರ್ಯಕ್ರಮ ಆಚರಿಸಿದ ಕಾಪು ಯುವ ವಾಹಿನಿ ಘಟಕ
ಕಾಪು: ಕಾಪು ತಾಲೂಕು ಯುವ ವಾಹಿನಿ ಘಟಕದ ವತಿಯಿಂದ ಶನಿವಾರ ಕಾಪು ಬಳಿಯ ಶಂಕರಪುರ ವಿಶ್ವಾಸದ ಮನೆಯ ನಿರ್ಗತಿಕ ವಿದ್ಯಾರ್ಥಿಗಳಿಗೆ ಹಾಗೂ ಅನಾಥರಿಗೆ ಒಂದು ದಿನದ ಅನ್ನ ಆಹಾರ ಹಾಗೂ ಪುಸ್ತಕ ನೀಡುವುದರ ನಾರಾಯಣ ಗುರುಗಳ 164ನೇ ಜಯಂತಿಯನ್ನು ವಿಶಿಷ್ಠವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಕಟಪಾಡಿ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಮಾತನಾಡಿ, ನಾರಾಯಣ ಗುರುಗಳು ಸರ್ವಧರ್ಮವನ್ನು ಹರಿಕಾರರು. ಒಂದೇ ಜಾತಿ ಒಂದೇ ಮತ ಹಾಗೂ ಒಂದೇ ಧರ್ಮವನ್ನು ಪಾಲಿಸುವವರಲ್ಲಿ ಅವರು ಆಗ್ರಗಣ್ಯರು. ಅವರ ಅನುಯಾಯಿಗಳಿಗೂ ಅವರು ಅದನ್ನೇ ಬೋಧಿಸಿದ್ದಾರೆ. ಕಾಪು ಯುವ ವಾಹಿನಿ ಘಟಕದ ಅಧ್ಯಕ್ಷ ದೀಪಕ್ ಎರ್ಮಾಳು ಅವರ ತಂಡ ಶಂಕರಪುರದ ವಿಶ್ವಾಸದ ಮನೆಯಲ್ಲಿರುವ ಅನಾಥ ಹಾಗೂ ನಿರ್ಗತಿಕರಿಗೆ ಅನ್ನಾಹಾರ ನೀಡುವ ಮೂಲಕ ಗುರುಗಳ ಮಾತನ್ನು ಅಕ್ಷರಶಃ ಪಾಲಿಸಿದ್ದಾರೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಯುವವಾಹಿನಿ ಗೌರವಾಧ್ಯಕ್ಷ ಪ್ರಭಾಕರ ಪೂಜಾರಿ, ಅಧ್ಯಕ್ಷ ದೀಪಕ್ ಎರ್ಮಾಳು, ಕಾಪು ಬಿಲ್ಲವ ಸಂಘದ ಅಧ್ಯಕ್ಷ ವಿಕ್ರಮ್ ಕಾಪು, ಮಾಜಿ ಅಧ್ಯಕ್ಷ ಮಾಧವ ಪಾಲನ್, ರಮೇಶ್ ಕಾಪು, ರಾಹುಲ್, ವಿಶ್ವಸದ ಮನೆಯ ಸಂಚಾಲಕ ಫಾಸ್ಟರ್ ಮ್ಯಾಥ್ಯು, ಸೂರ್ಯ ನಾರಾಯಣ, ಸಚಿನ್ ಉಚ್ಚಿಲ, ಶಶಿಧರ ಸಾಲ್ಯಾನ್ ಪ್ರಕಾಶ್ ವಿ ಅಂಚನ್ , ಮತ್ತಿತರರು ಉಪಸ್ಥಿತರಿದ್ದರು.


