ವಿಶ್ವಆರೋಗ್ಯ ಸಂಸ್ಥೆಯ ಪ್ರತಿಷ್ಠಾನದ ಸಿಇಓ ಆಗಿ ಭಾರತೀಯ ಮೂಲದ  ಅನಿಲ್ ಸೋನಿ ನೇಮಕ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ವಿಶ್ವಆರೋಗ್ಯ ಸಂಸ್ಥೆಯ ಪ್ರತಿಷ್ಠಾನದ ಸಿಇಓ ಆಗಿ ಭಾರತೀಯ ಮೂಲದ  ಅನಿಲ್ ಸೋನಿ ನೇಮಕ -Vishwanews24

ನ್ಯೂಯಾರ್ಕ್ : ವಿಶ್ವದಲ್ಲಿಯೇ ಆರೋಗ್ಯ ಕ್ಷೇತ್ರದಲ್ಲಿ ಮನ್ನಣೆಗಳಿಸಿರುವಂತ ಭಾರತೀಯ ಮೂಲಕ ತಜ್ಞ ಅನಿಲ್ ಸೋನಿಗೆ ಇದೀಗ ಮತ್ತೊಂದು ಮನ್ನಣೆ ದೊರೆತಿದೆ. ವಿಶ್ವ ಆರೋಗ್ಯ ಸಂಸ್ಥೆಯ ( ಡಬ್ಲ್ಯು ಹೆಚ್ ಒ ಫೌಂಡೇಷನ್) ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿ ನೇಮಕ ಮಾಡಲಾಗಿದೆ. ಈ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಷ್ಠಾನದ ಸಿಇಒ ಆಗಿ ಭಾರತ ಮೂಲಕ ಅನಿಲ್ ಸೋನಿ ನೇಮಕಗೊಂಡಂತೆ ಆಗಿದೆ.

ಈ ಕುರಿತಂತೆ ಡಬ್ಲ್ಯುಹೆಚ್‌ಒ ಫೌಂಡೇಷನ್ ಮಾಹಿತಿ ಬಿಡುಗಡೆ ಮಾಡಿದ್ದು, ಆರೋಗ್ಯ ಕ್ಷೇತ್ರದಲ್ಲಿ ಜಾಗತೀಕ ಮನ್ನಣೆ ಪಡೆದಿರುವ ಭಾರತ ಮೂಲಕ ತಜ್ಞ ಅನಿಲ್ ಸೋನಿ ಅವರನ್ನು ಸಂಸ್ಥೆಯ ಸಿಇಒ ಆಗಿ ನೇಮಕ ಮಾಡಲಾಗಿದೆ. ಅವರು ಜನವರಿ 1, 2021ರಂದು ಅಧಿಕಾರ ಸ್ವೀಕರಿಸಲಿರುವುದಾಗಿ ತಿಳಿಸಿದೆ.

ಇನ್ನೂ ಮುಂದುವರೆದು, ಪ್ರತಿಷ್ಠಾನವು ಡಬ್ಲ್ಯೂಹೆಚ್‌ಒಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದೇ ಉದ್ದೇಶದಿಂದ ಅನಿಲ್ ಸೋನಿ ಅವರು ಸಂಸ್ಥಯ ಪ್ರತಿಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬುದಾಗಿ ತಿಳಿಸಿದೆ.