ವಿಶ್ವನ್ಯೂಸ್24 ವರದಿ ಫಲಶ್ರುತಿ : ಕಟಪಾಡಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ಯಾಂಕರ್ ತೆರವುಗೊಳಿಸಿದ ಪೊಲೀಸ್ ಇಲಾಖೆ-ಸಾರ್ವಜನಿಕರಿಂದ ಮೆಚ್ಚುಗೆ:Vishwanews24

Featured, ಉಡುಪಿ

ವಿಶ್ವನ್ಯೂಸ್24 ವರದಿ ಫಲಶ್ರುತಿ : ಕಟಪಾಡಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ಯಾಂಕರ್ ತೆರವುಗೊಳಿಸಿದ ಪೊಲೀಸ್ ಇಲಾಖೆ-ಸಾರ್ವಜನಿಕರಿಂದ ಮೆಚ್ಚುಗೆ:Vishwanews24

ಕಾಪು: ಅಪಘಾತಕ್ಕೆ ನಾಂದಿ ಹಾಡುತ್ತಿದೆ ಕಟಪಾಡಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಟ್ಯಾಂಕರ್- ವಾರ ಕಳೆದರೂ ತೆರವಾಗದ ಟ್ಯಾಂಕರ್ ಸದ್ಯ ಡೇಂಜರ್ ಸ್ಪಾಟ್ ಎಂಬ ತಲೆಬರಹದಡಿಯಲ್ಲಿ ವಿಶ್ವನ್ಯೂಸ್24 ಮಂಗಳವಾರ ಕಟಪಾಡಿ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿಯ ತೆರವುಗೊಳಿಸುವ ಬಗ್ಗೆ ವರದಿ ಪ್ರಕಟಿಸಿತ್ತು.

           ತೆರವಿನ‌ ಮೊದಲು ಕೆಟ್ಟು ನಿಂತ ಟ್ಯಾಂಕರ್

ವರದಿ‌ ಪ್ರಕಟವಾದ 18 ಗಂಟೆಯಲ್ಲಿ ಕಟಪಾಡಿ ಹೊರಠಾಣೆ ಪೊಲೀಸ್ ಎ.ಎಸೈ ಜಯಪ್ರಕಾಶ್ ಅವರ ತುರ್ತು ಮುತುವರ್ಜಿಯಿಂದ ಇಂದು ಮಧ್ಯಾಹ್ನ ಹೆದ್ದಾರಿಯಲ್ಲಿದ್ದ ಟ್ಯಾಂಕರ್ ತೆರವುಗೊಳಿಸಲಾಗಿದೆ.

            ಹೆದ್ದಾರಿಯಿಂದ ತೆರವಾದ ಟ್ಯಾಂಕರ್

ಕಳೆದ ಒಂದು ವಾರದಿಂದ ಹೆದ್ದಾರಿಯಲ್ಲಿ ಕೊರಗುತ್ತಿದ್ದ ಟ್ಯಾಂಕರ್ ಗೆ ಸದ್ಯ ಮುಕ್ತಿ ದೊರಕಿ ಹೆದ್ದಾರಿಯು ಸಂಚಾರಕ್ಕೆ ಮುಕ್ತವಾಗಿದೆ.
ಈ‌ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಬ್ಯೂರೊ ರಿಪೋರ್ಟ್ : ವಿಶ್ವನ್ಯೂಸ್24

Leave a Reply