ಶಂಕರಪುರ: ಕಾರು ಹಾಗೂ ಟಿಪ್ಪರ್ ಮುಖಮುಖಿ ಡಿಕ್ಕಿ – ಟಿಪ್ಪರ್ ಅಡಿಗೆ ಬಿದ್ದು ಚಾಲಕ ಸ್ಥಳದಲ್ಲೇ ಮೃತ್ಯು – vishwanews24
ಶಂಕರಪುರ: ಕಾರು ಹಾಗೂ ಟಿಪ್ಪರ್ ಮುಖಮುಖಿ ಡಿಕ್ಕಿ – ಟಿಪ್ಪರ್ ಅಡಿಗೆ ಬಿದ್ದು ಚಾಲಕ ಸ್ಥಳದಲ್ಲೇ ಮೃತ್ಯು
ಶಿರ್ವ : ಶಂಕರಪುರ ಮುಖ್ಯರಸ್ತೆಯಲ್ಲಿ ಕಾರು ಮತ್ತು ಟಿಪ್ಪರ್ ಮುಖಮುಖಿ ಡಿಕ್ಕಿಯಾದ ಪರಿಣಾಮ ಟಿಪ್ಪರ್ ಅಡಿಗೆ ಬಿದ್ದು ಚಾಲಕ ಮೃತಪಟ್ಟ ಘಟನೆ ದುರ್ಗಾ ನಗರ ಎಂಬಲ್ಲಿ ಸಂಭವಿಸಿದೆ.
ಶಿರ್ವದಿಂದ ಕಟಪಾಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಗುಚಿಬಿದ್ದ ಟಿಪ್ಪರ್ ನಿಂದ ಅದರ ಚಾಲಕ ಹೊರಕ್ಕೆ ಹಾರಿದ್ದಾರೆ.
ದುರಾದೃಷ್ಟವಶಾತ್ ಟಿಪ್ಪರ್ ನ ಅಡಿಗೆ ಬಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತ ಚಾಲಕ ಕೊಕ್ಕರ್ಣೆ ನಿವಾಸಿ ಕೃಷ್ಣ ನಾಯ್ಕ (55) ಎಂದು ಗುರುತಿಸಲಾಗಿದೆ.
ಅತಿ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.
