ಶಂಕರಪುರ: ಹೃದಯಾಘಾತ – 18 ವರ್ಷದ ಯುವಕ ನಿಧನ -vishwanews24

Featured, ಉಡುಪಿ

ಶಂಕರಪುರ: ಹೃದಯಾಘಾತ – 18 ವರ್ಷದ ಯುವಕ ನಿಧನ

KAUP : ಹೃದಯಾಘಾತದಿಂದಾಗಿ 18 ವರ್ಷದ ಯುವಕನೋರ್ವ ಮೃತಪಟ್ಟ ಘಟನೆ ಶಂಕರಪುರ ಸಮೀಪದ ಸರ್ಕಾರಿಗುಡ್ಡೆ ಬಳಿ ನಡೆದಿದೆ.

ಮೃತ ಯುವಕನನ್ನು ಶಂಕರಪುರ ಸಮೀಪದ ಸರ್ಕಾರಿಗುಡ್ಡೆ ನಿವಾಸಿ ಚಂದ್ರ ಪೂಜಾರಿ ಅವರ ಪುತ್ರ ಕಾರ್ತಿಕ್ ಪೂಜಾರಿ (18) ಎಂದು ಗುರುತಿಸಲಾಗಿದೆ.

ಉಡುಪಿ: ಸೈಂಟ್ ಮೇರೀಸ್ ದ್ವೀಪಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ – vishwanews24

ಮೃತ ಕಾರ್ತಿಕ್ ಪೂಜಾರಿ ಹಿಂದಿನಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಶುಕ್ರವಾರ  ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕಾರ್ತಿಕ್ ಕಾಪು ಮತ್ತು ಕಟಪಾಡಿ ವಲಯದ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಸಂಘದ ಅಧ್ಯಕ್ಷ, ಸಮಾಜಸೇವಕ ಚಂದ್ರ ಪೂಜಾರಿ ಹಾಗೂ ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಶಾಲಿನಿ ಚಂದ್ರ ದಂಪತಿಗಳ ಪುತ್ರರಾಗಿದ್ದಾರೆ.

ಉಡುಪಿ : ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ – ಕಾರುಗಳ ಢಿಕ್ಕಿ ಹೊಡೆಸಿ ಹೊಡೆದಾಟ: ವಿಡಿಯೋ ವೈರಲ್ – vishwanews24

 

Leave a Reply