ಶಂಕರಾಚಾರ್ಯರ ಜಯಂತಿಯ ಜೊತೆಗೆ ಮಧ್ವಚಾರ್ಯರ ಜಯಂತಿ ಆಚರಣೆಗೆ ಉಡುಪಿ ಶಾಸಕ ರಘುಪತಿ ಭಟ್ ಆಗ್ರಹ.

Featured, ಉಡುಪಿ

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದ್ದು , ಮುಖ್ಯಮಂತ್ರಿ ಕುಮಾರಸ್ವಾಮಿಯ ವಿರುದ್ಧ ಉಡುಪಿ ಶಾಸಕ ರಘುಪತಿ ಹರಿಹಾಯ್ದಿದ್ದಾರೆ ಬಜೆಟ್ ವಿಚಾರವಾಗಿ ಮಾಧ್ಯಮದವರ ಜತೆ ಮಾತಾಡುತ್ತಾ” ಕರಾವಳಿ ಭಾಗವನ್ನ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಸಣ್ಣ ನೀರಾವರಿ,ಪ್ರವಾಸೋದ್ಯಮದ ಬಗ್ಗೆಯಾಗಲಿ ಯಾವುದೇ ವಿಚಾರವನ್ನ ಬಜೆಟ್ ನಲ್ಲಿ ಘೋಷಿಸಿಲ್ಲ, ವಿಶೇಷವಾಗಿ ರೈತರ ಸಾಲಮನ್ನದ ಜತೆಗೆ ಮೀನುಗಾರರ ಸಾಲಮನ್ನ ವಿಶೇಷವಾಗಿ ಮಹಿಳಾ ಮೀನುಗಾರರ ಸಾಲವನ್ನಾದರೂ ಮಾಡಿ ಎಂದು ಮನವಿ ಮಾಡಿದ್ದರು ಯಾವುದನ್ನ ಗಣನೆಗೆ ಪಡೆಯದೆ ತಾರತಮ್ಯದ ಬಜೆಟ್ ಮಂಡನೆ ಮಾಡಿರುವುದೆ ಖೇದಕರ ಎಂದರು, ಮತ್ತು ಸರ್ಕಾರ ಶಂಕರಾಚಾರ್ಯರ ಜಯಂತಿ ಆಚರಣೆಗೆ ಅಸ್ತು ಅಂದಿರುವುದು ಸ್ವಾಗತ ಅದರ ಜತೆಗೆ ಮಧ್ವಚಾರ್ಯರು ಕರ್ನಾಟಕದಲ್ಲಿಯೇ ಹುಟ್ಟಿದ ಬೆಳೆದ ಮಹಾನ್ ವ್ಯಕ್ತಿ ಅವರ ಆಚರಣೆಯನ್ನು ಮಾಡುವಲ್ಲಿ ಸರ್ಕಾರ ಗಮನಹರಿಸಬೇಕೆಂದು ಆಗ್ರಹಿಸಿದರು