ಶಬ್ದಮಾಲಿನ್ಯ ನಿಯಂತ್ರಣಕ್ಕಾಗಿ ದೇವಸ್ಥಾನ, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸಿದ ಪಂಜಾಬ್ ಹೈಕೋರ್ಟ್ -Vishwanews24
ಚಂಡೀಗಢ: ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಪೂರ್ಣ ನಿಷೇಧ ಹೇರಿದೆ.
ಅಧಿಕಾರಿಗಳ ಲಿಖಿತ ಅನುಮತಿಯಿಲ್ಲದೆ ಧಾರ್ಮಿಕ ಸ್ಥಳಗಳಾದ ದೇವಾಲಯ, ಮಸೀದಿಗಳು ಮತ್ತು ಗುರುದ್ವಾರಗಳನ್ನು ಸಹ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.
ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಅಥವಾ ಮ್ಯೂಸಿಕ್ ಸಿಸ್ಟಂ ಬಳಕೆಯನ್ನು ನಿರ್ಬಂಧಿಸಲಾಗಿದೆ. ಧ್ವನಿವರ್ಧಕಗಳ ಶಬ್ದಕ್ಕೂ ಮಿತಿ ಹೇರಲಾಗಿದ್ದು ಅದು 10 ಡೆಸಿಬಲ್ಗಿಂತಲೂ ಮೀರಬಾರದೆಂದು ಕೋರ್ಟ್ ಆದೇಶಿಸಿದೆ. ಆದರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಲೌಡ್ ಸ್ಪೀಕರ್ ಬಳಸಲು ವರ್ಷದಲ್ಲಿ 15 ದಿನಗಳ ಕಾಲ ಈ ನಿಯಮವನ್ನು ಸಡಿಲಿಸಲಾಗಿದೆ.
ನ್ಯಾಯಮೂರ್ತಿಗಳಾದ ರಾಜೀವ್ ಶರ್ಮಾ ಮತ್ತು ಹರಿಂದರ್ ಸಿಂಗ್ ಸಿಧು ಅವರನ್ನೊಳಗೊಂಡ ಹೈಕೋರ್ಟ್ ಪೀಠವು ಪೊಲೀಸ್ ಹರಿಯಾಣ ಮತ್ತು ಚಂಡೀಗಡ ಮಹಾನಿರ್ದೇಶಕರು, ಜಿಲ್ಲಾ ಆಯುಕ್ತರು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರಿಗೆ ಈ ಆದೇಶವನ್ನು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಹೇಳಿದೆ. ಒಂದು ವೇಳೆ ಈ ಕೋರ್ಟ್ ಆದೇಶವನ್ನು ಹಾಗೂ ಶಬ್ದ ಮಾಲಿನ್ಯ ಮತ್ತು ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಹೇಳಿದೆ.

