ಶಾಲೆ ಆರಂಭಕ್ಕೂ ಮುನ್ನ ಹೆಚ್ಚಿನ ಫೀಸ್ ಕೇಳುವ ಶಾಲೆಗಳ ಮೇಲೆ ಕ್ರಮ: ಸಿಎಂ ಯಡಿಯೂರಪ್ಪ – Vishwanews24

Featured, ರಾಜ್ಯ ನ್ಯೂಸ್

ಶಾಲೆ ಆರಂಭಕ್ಕೂ ಮುನ್ನ ಹೆಚ್ಚಿನ ಫೀಸ್ ಕೇಳುವ ಶಾಲೆಗಳ ಮೇಲೆ ಕ್ರಮ: ಸಿಎಂ ಯಡಿಯೂರಪ್ಪ – Vishwanews24

ಹಾಸನ: ಶಾಲೆ ಆರಂಭಕ್ಕೂ ಮುನ್ನ ಫೀಸ್ ಭರಿಸಯವಂತೆ ಹಾಗೂ ಹೆಚ್ಚಿನ ಫೀಸ್ ನೀಡುವಂತೆ ಯಾವುದೇ ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರಿದ್ದಲ್ಲಿ ಅಂತಹ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಹಾಸನದಲ್ಲಿ ಇಂದು ಮೊದಲ ಪ್ರಗತಿ ಪರಿಶೀಲನೆ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಾಲೆಗಳ ಆರಂಭಕ್ಕೂ ಮುನ್ನ ಫೀಸ್ ಕಟ್ಟುವಂತೆ ಯಾವ ಖಾಸಗಿ ಶಾಲೆಯವರು ಒತ್ತಾಯ ಮಾಡಬಾರದು. ಫೀಸ್ ಕಟ್ಟುವಂತೆ ಒತ್ತಾಯ ಮಾಡುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.