ಶಾಸಕ ಜಮೀರ್ ಅಹಮದ್ ಮೊದಲು ಯಡಿಯೂರಪ್ಪ ಮನೆ ಹತ್ತಿರ ಹೋಗಿ ವಾಚ್ ಮ್ಯಾನ್ ಆಗಲಿ : ರೋಷನ್ ಬೇಗ್ -Vishwanews24
ಬೆಂಗಳೂರು: ಶಾಸಕ ಜಮೀರ್ ಅಹಮದ್ ಮೊದಲು ಯಡಿಯೂರಪ್ಪ ಮನೆ ಹತ್ತಿರ ಹೋಗಿ ವಾಚ್ ಮ್ಯಾನ್ ಆಗಲಿ. ನಾನು ಬೇರೆಯವರಿಂದ ಪಾಠ ಕಲಿಯಬೇಕಿಲ್ಲ. ನಾನು ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿಲ್ಲ ಎಂದು ಜಮೀರ್ ಅಹಮದ್ ಗೆ ಮಾಜಿ ಶಾಸಕ ರೋಷನ್ ಬೇಗ್ ತಿರುಗೇಟು ನೀಡಿದ್ದಾರೆ.
ರೋಷನ್ ಬೇಗ್ ಬಿಜೆಪಿ ಕಚೇರಿಯಲ್ಲಿ ಕಸಗುಡಿಸಿದರೆ 2023ರಲ್ಲಿ ಚುನಾವಣಾ ಟಿಕೆಟ್ ಸಿಗಬಹುದು ಎಂಬ ಜಮೀರ್ ಅಹಮದ್ ಟೀಕೆಗೆ ಬೇಗ್ ತಿರುಗೇಟು ನೀಡಿದರು.
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆಯಲ್ಲಿ ಕಾಂಗ್ರೆಸ್ ನವರ ಕೈವಾಡ ಇದೆ. ಗಲಭೆಯಲ್ಲಿ ಕೆಲವರು ಅಮಾಯಕರು ಇರಬಹುದು. ಅಮಾಯಕರನ್ನು ಬಿಡಿ ಅಂತ ನಾನೇ ಹೇಳಿದ್ದೇನೆ. ಆದರೆ ಮೌಲಾನಾಗಳು ಗೋರಿ ಪಾಳ್ಯದಿಂದ ಯಾಕೆ ಇಲ್ಲಿಗೆ ಬರಬೇಕಿತ್ತು? ಟಿಪ್ಪು ನಗರದಿಂದ ಇಲ್ಲಿಗೆ ಗಲಾಟೆಗೆ ಹೊರಗಡೆಯಿಂದ ಯಾಕೆ ಬರಬೇಕಿತ್ತು ಎಂದು ಪ್ರಶ್ನಿಸಿದರು. ಬೆಂಗಳೂರು ಗಲಭೆಯಲ್ಲಿ ಕೆಲ ಅಮಾಯಕ ಮಂದಿಯೂ ಇರಬಹುದು. ಅಮಾಯಕರನ್ನು ಬಿಡಿ ಎಂದು ಖುದ್ದಾಗಿ ನಾನೇ ತಿಳಿಸಿದ್ದೆ. ಈ ಗಲಭೆಯಲ್ಲಿ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದರು.
ನಾನು ಯಾವುದೇ ಎಸ್ ಡಿಪಿಐ ನ್ನು ಬೆಂಬಲಿಸಿಲ್ಲ. ನಾನು ಹೋರಾಟ ಮಾಡಿಕೊಂಡು ಬಂದವನು. ಹಿಂದೆ ಒಂದು ಗಲಾಟೆಯಲ್ಲಿ ರಮೇಶ್ ಕುಮಾರ್, ಸುದರ್ಶನ್, ಮಹದೇವಪ್ಪ ನನ್ನ ಜೀವ ಉಳಿಸಿದಾರೆ ಎಂದರು.
