ಶಿರ್ವ ಡೇವಿಡ್‌ ಡಿ’ಸೋಜಾ ಕೊಲೆ ಪ್ರಕರಣಕ್ಕೆ ಶೀಘ್ರವೇ ತಾರ್ಕಿಕ ಅಂತ್ಯ – vishwanews24

Featured, ಉಡುಪಿ

ತಾರ್ಕಿಕ ಅಂತ್ಯ ಕಾಣಲಿರುವ ಶಿರ್ವ ಡೇವಿಡ್‌ ಡಿ’ಸೋಜಾ ಕೊಲೆ ಪ್ರಕರಣ

ಹೊರ ರಾಜ್ಯದಲ್ಲಿ ಮಧ್ಯವರ್ತಿಯ ಹುಡುಕಾಟ ..

 ಪೊಲೀಸರಿಂದ ಆರೋಪಿಗಳ ಮಾಹಿತಿ ಶೀಘ್ರದಲ್ಲೇ ಬಯಲಿಗೆ

ಉಡುಪಿ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಹಾಡಲು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.

ಪ್ರಕರಣ ಸಂಬಂಧಿಸಿ ಹೆಚ್ಚಿನ ತನಿಖೆಯನ್ನು ಪೊಲೀಸರು ಈಗಾಗಲೇ ಪೂರ್ಣಗೊಳಿಸಿದ್ದು, ಕೊಲೆಯ ಪ್ರಮುಖ ರೂವಾರಿಗಳ ಮಾಹಿತಿ ಜಿಲ್ಲೆಯಲ್ಲೇ ಪತ್ತೆಯಾಗಿದೆ ಎನ್ನಲಾಗಿದೆ. ಕೊಲೆ ಮಾಡಲು ಸುಪಾರಿ ಕೊಲೆಗಾರರನ್ನು ಕಳುಹಿಸಿದ ಮಧ್ಯವರ್ತಿಯನ್ನು ಪೊಲೀಸರು ಹೊರ ರಾಜ್ಯದಲ್ಲಿ ಹುಡುಕಾಡುತ್ತಿದ್ದು, ಕೊಲೆಯ ಉದ್ದೇಶದೊಂದಿಗೆ ಪ್ರಕರಣದ ಆರೋಪಿಗಳ ಮಾಹಿತಿಯನ್ನು ಪೊಲೀಸರು ಶೀಘ್ರದಲ್ಲಿ ಬಯಲಿಗೆಳೆಯಲಿದ್ದಾರೆ ಎನ್ನಲಾಗಿದೆ.

ಬಿ.ಪಿ.ಎಲ್. ಪಡಿತರ ಚೀಟಿ ಆದಾಯ ಮಿತಿ ರೂ. 3 ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ – vishwanews24

 

ಡೇವಿಡ್ ಡಿಸೋಜಾ ಅವರನ್ನು ಕೊಲೆ ಮಾಡಿದ ಮೂವರು ಆರೋಪಿಗಳು ಜಿಲ್ಲೆಗೆ ಭೇಟಿ ನೀಡಿದ ಬಳಿಕ ಆ್ಯಪ್ ಮೂಲಕವೇ ಒಬ್ಬರಿಗೊಬ್ಬರು ಸಂವಹನ ನಡೆಸಿ ಯೋಜನೆ ಹಾಕುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ಹಿಡಿದು ವಿಚಾರಣೆ ನಡೆಸಿದಾಗ ಈ ಬಗ್ಗೆ ಆರೋಪಿಗಳು ಬಾಯ್ದಿಟ್ಟಿದ್ದು, ಪೊಲೀಸರು ಅವರ ಆ್ಯಪ್ ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಬಂಟ್ವಾಳ: ಗಾಂಜಾ ಸಹಿತ ಮೂವರ ಬಂಧನ ; 4.90 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ – vishwanews24

Leave a Reply