ಶಿರ್ವ : ರಸ್ತೆಗೆ ಉರುಳಿಬಿದ್ದ ಮರ – ದ್ವಿಚಕ್ರ ವಾಹನ ಸವಾರನಿಗೆ ಗಾಯ – Vishwanews24

Featured, ಉಡುಪಿ

ಶಿರ್ವ : ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದ ಮಾವಿನ  ಮರ ..

ದ್ವಿಚಕ್ರ ವಾಹನ ಸವಾರನಿಗೆ ಗಾಯ , ರಸ್ತೆ ಸಂಚಾರಕ್ಕೆ ಅಡಚಣೆ..

ಘಟನಾ ಸ್ಥಳಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ..

ಕಟಪಾಡಿ : ಕಟಪಾಡಿ ಶಿರ್ವ ರಸ್ತೆಯ ಕಟಪಾಡಿ ವಾರದ ಸಂತೆ ಮಾರುಕಟ್ಟೆ ಬಳಿ ಖಾಸಗಿಯವರಿಗೆ ಸೇರಿದ ಮಾವಿನ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದು ರಸ್ತೆಸಂಚಾರಕ್ಕೆ ಅಡಚಣೆಯುಂಟಾದ ಘಟನೆ ಶನಿವಾರ ರಾತ್ರಿ  ನಡೆದಿದೆ.

ಘಟನೆಯಲ್ಲಿ ಒಬ್ಬ ದ್ವಿಚಕ್ರ ವಾಹನ ಸವಾರ ಚಿಟ್ಪಾಡಿ ಡಯನಾ ಟಾಕೀಸ್ ಬಳಿಯ ಸೆಲ್ವ ಕುಮಾರ್(೩೯)ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಎರಡು ದ್ವಿಚಕ್ರವಾಹನಗಳಿಗೆ ಹಾನಿಯಾಗಿದೆ.

ಶನಿವಾರ ವಾರದ ಸಂತೆ ನಡೆಯುತ್ತಿದ್ದು, ಮಳೆ ಬರುತ್ತಿದ್ದ ಕಾರಣ ರಸ್ತೆಯಲ್ಲಿ ಹೆಚ್ಚಿನ ಜನಸಂಚಾರ ಇಲ್ಲದ   ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ.

ಭಾರೀ ಮಳೆಯ ಎಚ್ಚರಿಕೆ : ಕರಾವಳಿಗೆ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಣೆ – Vishwanews24

ರಸ್ತೆಗೆ ಅಡ್ಡಲಾಗಿ ಮರ ಉರುಳಿರುವುದರಿಂದ ಬೆಳ್ಮಣ್ ಶಿರ್ವ ಕಟಪಾಡಿ ಭಾಗದ ವಾಹನ ಸವಾರರಿಗೆ ತೊಂದರೆಯಾಗಿದ್ದ,  ರೂಟ್ ಬಸ್ಸುಗಳು ಮೂಡಬೆಟ್ಟು ಶಂಕರಪುರ ರಸ್ತೆಯ ಮೂಲಕ ಸಂಚರಿಸುವಂತಾಯಿತು.

ಸ್ಥಳೀಯ ಪೋಲಿಸರು ಅರಣ್ಯ ಸಿಬಂದಿ ಹಾಗೂ ಸಾರ್ವಜನಿಕರು ರಸ್ತೆಯಿಂದ ಮರ ತೆರವುಗೊಳಿಸಲು ಸಹಕರಿಸಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಕಟಪಾಡಿ ಹೊರಠಾಣಾ ಸಿಬಂದಿ ರುಕ್ಮಯ್ಯ ಹಾಗೂ ಮೋಹನ್ ತೆರವು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮರು ತನಿಖೆಗೆ  ಸಿಎಂಗೆ ಮನವಿ ಸಲ್ಲಿಸಿದ ಶಾಸಕ ಪೂಂಜ – Vishwanews24

Leave a Reply