ಶಿವಮೊಗ್ಗ ಏರ್​​ಪೋರ್ಟ್​ನಲ್ಲಿ ನ. 21ರಿಂದ 3 ತಿಂಗಳು ವಿಮಾನ ಹಾರಾಟ ಸ್ಥಗಿತ – vishwanews24

ಉಡುಪಿ

ಶಿವಮೊಗ್ಗ: ವಿಮಾನ ನಿಲ್ದಾಣದಿಂದ ನ.21ರಿಂದ ವಿಮಾನ ಹಾರಾಟ ಸ್ಥಗಿತ ; ಮೂರು ತಿಂಗಳ ಕಾಲ ಸೇವೆ ಬಂದ್

ಶಿವಮೊಗ್ಗ: ಉಡಾನ್ ಯೋಜನೆಯ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಮುಂದಿನ ಮೂರು ತಿಂಗಳ ಕಾಲ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ. ನವೆಂಬರ್ 21ರಿಂದ ವಿಮಾನಯಾನ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಅಧ್ಯಕ್ಷ ನಂಜಯ್ಯನಮಠ್ ತಿಳಿಸಿದ್ದಾರೆ.

ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ಕ್ಕೆ ಉಡಾನ್ ಯೋಜನೆ ಮುಕ್ತಾಯಗೊಳ್ಳಲಿದೆ. ಯೋಜನೆಯನ್ನು ಮುಂದುವರಿಸುವಂತೆ ರಾಜ್ಯದ ಅಧಿಕಾರಿಗಳು ದೆಹಲಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ತಾವು ಕೂಡ ದೆಹಲಿಗೆ ತೆರಳಿ ವಿನಂತಿಸಿಕೊಂಡಿರುವುದಾಗಿ ತಿಳಿಸಿದರು.

ಮಂಗಳೂರು: ವ್ಯಕ್ತಿಯ ಅಪಹರಿಸಿ ದರೋಡೆ ಪ್ರಕರಣ : ಪೊಲೀಸ್ ಸಿಬ್ಬಂದಿ ಸೇರಿ ಐವರ ಬಂಧನ – vishwanews24

ಉಡಾನ್ ಯೋಜನೆ ಮುಂದುವರಿದ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮತ್ತೆ ವಿಮಾನಯಾನ ಆರಂಭಿಸಲು ಕನಿಷ್ಠ ಮೂರು ತಿಂಗಳು ಬೇಕಾಗಬಹುದು. ಈ ಅವಧಿಯಲ್ಲಿ ವಿಮಾನ ನಿಲ್ದಾಣವನ್ನು ಪುನಃ ಸುಸ್ಥಿತಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವಿಮಾನಯಾನ ಸೇವೆ ಪುನರಾರಂಭಿಸುವ ಸಂಬಂಧ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೂ ಚರ್ಚಿಸಲಾಗಿದೆ. ಕೇಂದ್ರದಲ್ಲಿ ಅವರದೇ ಸರ್ಕಾರ ಇರುವುದರಿಂದ ಈ ವಿಚಾರದಲ್ಲಿ ಪ್ರಯತ್ನಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

13 ಮಾರ್ಗಗಳಿಗೆ ವಿಮಾನಯಾನ ಪ್ರಸ್ತಾವನೆ

ಕೆಎಸ್ಐಐಡಿಸಿ ವತಿಯಿಂದ ಶಿವಮೊಗ್ಗದಿಂದ 13 ಮಾರ್ಗಗಳಿಗೆ ವಿಮಾನಯಾನ ಆರಂಭಿಸುವಂತೆ ಮನವಿ ಸಲ್ಲಿಸಲಾಗಿದೆ. ಬೆಂಗಳೂರು, ಹೈದರಾಬಾದ್, ಗೋವಾ, ತಿರುಪತಿ, ಮುಂಬೈ, ಪುಣೆ, ಮೈಸೂರು, ಸೂರತ್, ಕೊಲ್ಲಾಪುರ, ಕೊಚ್ಚಿ, ಮಂಗಳೂರು, ಅಹಮದಾಬಾದ್ ಹಾಗೂ ಚೆನ್ನೈ ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸುವ ಪ್ರಸ್ತಾವನೆ ಇದೆ ಎಂದು ಹೇಳಿದರು.

ಬೆಳ್ತಂಗಡಿ: ಯುವಕ ಆತ್ಮಹತ್ಯೆ  – vishwanews24

ವಿಮಾನ ಹಾರಾಟ ಮೂರು ತಿಂಗಳು ಸ್ಥಗಿತಗೊಂಡರೂ ವಿಮಾನ ನಿಲ್ದಾಣದ 80 ಮಂದಿ ನೌಕರರನ್ನು ಮುಂದುವರಿಸಲಾಗುವುದು. ಇವರಿಗೆ ಪ್ರತಿ ತಿಂಗಳು ಒಟ್ಟು 95 ಲಕ್ಷ ರೂ. ವೇತನ ಪಾವತಿಸಲಾಗುತ್ತದೆ. ಉಡಾನ್ ಯೋಜನೆಯಡಿ ಶೇ.80ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಹಾಗೂ ಶೇ.20ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಒದಗಿಸುತ್ತದೆ. ರಾಜ್ಯ ಸರ್ಕಾರದ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಯೋಜನೆ ಮುಂದುವರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ನೈಟ್ ಲ್ಯಾಂಡಿಂಗ್ ಕಾಮಗಾರಿ ಶೇ.95 ಪೂರ್ಣ

ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಇಳಿಸುವ (ನೈಟ್ ಲ್ಯಾಂಡಿಂಗ್) ವ್ಯವಸ್ಥೆಗೆ ಸಂಬಂಧಿಸಿದಂತೆ ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಪ್ರಕ್ರಿಯೆ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ತಮ್ಮದೇ ವಿಮಾನದ ಮೂಲಕ ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಿ ವರದಿ ನೀಡಿದ ನಂತರ ಪ್ರಮಾಣಪತ್ರ ದೊರೆಯಲಿದೆ. ಬಳಿಕ ರಾತ್ರಿ ವಿಮಾನ ಇಳಿಸಲು ಅವಕಾಶ ಸಿಗಲಿದೆ ಎಂದರು.

ಇದೇ ವೇಳೆ ಬೆಂಗಳೂರು-ಶಿವಮೊಗ್ಗ ವಿಮಾನಯಾನ ಸೇವೆ ರಾಜ್ಯ ಸರ್ಕಾರದ ವಿಜಿಎಫ್ (VGF) ಯೋಜನೆಯಡಿ ನಡೆಯುತ್ತಿದ್ದು, ಇದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಮಂಗಳೂರು: ವ್ಯಕ್ತಿಯ ಅಪಹರಿಸಿ ದರೋಡೆ ಪ್ರಕರಣ : ಪೊಲೀಸ್ ಸಿಬ್ಬಂದಿ ಸೇರಿ ಐವರ ಬಂಧನ – vishwanews24

ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ದೇಶಕ ಶಂಮತ್ ಹಾಗೂ ಕೆಎಸ್ಐಐಡಿಸಿಯ ಡಿವೈಎಸ್ಪಿ ಚಂದ್ರಶೇಖರ್ ಉಪಸ್ಥಿತರಿದ್ದರು.

Leave a Reply