ಶಿವಮೊಗ್ಗ ಲೋಕಸಭೆ  :ಗೀತಾ ಶಿವರಾಜ್​ ಕುಮಾರ್ ಭರ್ಜರಿ ಮತಬೇಟೆ  – Vishwanews24

Featured, ರಾಜ್ಯ ನ್ಯೂಸ್

ಶಿವಮೊಗ್ಗ ಲೋಕಸಭೆ  : ಗೆಲ್ಲಬೇಕೆಂದು ಚುನಾವಣೆಗೆ ನಿಂತಿದ್ದೇನೆ – ಗೀತಾ ಶಿವರಾಜ್​ ಕುಮಾರ್ ಭರ್ಜರಿ ಮತಬೇಟೆ 

ಶಿವಮೊಗ್ಗ: ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಗೀತಾ ಶಿವರಾಜ್​ ಕುಮಾರ್ ಭರ್ಜರಿ ಮತಬೇಟೆ ನಡೆಸಿದರು. ಗೀತಾ ಅವರಿಗೆ ಪತಿ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಬಿ.ಕೆ.ಸಂಗಮೇಶ್, ಗೋಪಾಲಕೃಷ್ಣ ಬೇಳೂರು ಸಾಥ್ ನೀಡಿದರು.

ಭದ್ರಾವತಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು.. ಕಾರ್ಯಕರ್ತರ ಉತ್ಸಾಹ ನೋಡಿ ನನಗೆ ತುಂಬಾ ಸಂತೋಷ ಆಗುತ್ತಿದೆ. ಕಾರೇಹಳ್ಳಿಯಿಂದ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ. ಬೇಳೂರು ಗೋಪಾಲಕೃಷ್ಣ, ಬಿ.ಕೆ ಸಂಗಮೇಶ್ ನಮ್ಮ ಜೊತೆಗಿದ್ದಾರೆ. ಗೆಲ್ಲಬೇಕೆಂದು ಚುನಾವಣೆಗೆ ನಿಂತಿದ್ದೇನೆ. ವಾತಾವರಣ ತುಂಬಾ ಚೆನ್ನಾಗಿದೆ ಎಂದರು.

ಉಡುಪಿ: ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿ ಕಾಂಗ್ರೆಸ್ಸಿಗೆ ಅತಿ ಹೆಚ್ಚು ಮತ ಬೀಳುವಂತೆ ಮಾಡುತ್ತೇನೆ : ಸುಕುಮಾರ್ ಶೆಟ್ಟಿ – Vishwanews24

ಈಗಿನ ವಾತಾವರಣ ನೋಡಿದರೆ ನನ್ನ ಗೆಲುವಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಕ್ಷೇತ್ರದಲ್ಲಿ ಜನರು ನನ್ನನ್ನ ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ನಾವು ಫೈಟ್- ಗಿಟ್ ನೋಡುವುದಿಲ್ಲ. ಪಕ್ಷ ಏನು ಹೇಳುತ್ತೆ ಅದೇ ರೀತಿಯಲ್ಲಿ ಪ್ರಚಾರ ಆರಂಭಿಸಿದ್ದೇವೆ. ನಮ್ಮ ತಂದೆ ನಡೆದ ದಾರಿಯಲ್ಲೇ ನಾವು ನಡೆಯುತ್ತೇವೆ. ತಂದೆಯವರ ಸೇವೆ ನಮಗೆ ಅನುಕೂಲ ಆಗಲಿದೆ. ಪಂಚಾಯತ್ ಮಟ್ಟದಲ್ಲೂ ಪ್ರಚಾರ ಮಾಡಲು ಪ್ಲಾನ್ ಮಾಡಿದ್ದೇವೆ. ಸ್ಟಾರ್ ನಟರಿಗೆ ಆಹ್ವಾನ ನೀಡಿಲ್ಲ. ಬಿಸಿಲಿನಲ್ಲಿ ಅವರಿಗೂ ತೊಂದರೆ ಆಗುತ್ತೆ ಎಂದು ಆಹ್ವಾನ ನೀಡಿಲ್ಲ ಎಂದರು.

ಬಿ.ಸಿ.ರೋಡ್: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 2ನೇ ತರಗತಿ ವಿದ್ಯಾರ್ಥಿನಿ ನಿಧನ – Vishwanews24

Leave a Reply