ಶಿವಮೊಗ್ಗ : ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆ ಮಾಡಿದ ಮೋದಿ – Vishwanews24
ಇಡೀ ವಿಶ್ವವೇ ಮೆಚ್ಚಿರುವ ಆದರ್ಶ ನಾಯಕ ಪ್ರಧಾನಿ ಮೋದಿ -ಬಿಎಸ್ವೈ
ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಸ್ಮಾರ್ಟ್ಸಿಟಿ ಕಾಮಗಾರಿ, ಶಿಮುಲ್ ಹಾಲು ಪ್ಯಾಕಿಂಗ್ ಘಟಕ, ಮಾಮ್ ಕೋಸ್ ಆಡಳಿತ ಭವನ, ಶಿಮೊಗ್ಗ-ಶಿಕಾರಿಪುರ, ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ ಶಿಲಾನ್ಯಾಸ ಹಾಗೂ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಶಿಲಾನ್ಯಾಸ ಮಾಡಿದರು.
Prime Minister Narendra Modi inaugurates Shivamogga Airport in Karnataka. pic.twitter.com/3fkDgwAN7c
— ANI (@ANI) February 27, 2023
ಶಿವಮೊಗ್ಗದಲ್ಲಿ ನೂತನ ಏರ್ಪೋರ್ಟ್ ಉದ್ಘಾಟನಾ ಸಮಾರಂಭ ಸಮಾವೇಶದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಷಣ ಮಾಡಿದ್ದು ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಇಡೀ ವಿಶ್ವವೇ ಮೆಚ್ಚಿರುವ ಆದರ್ಶ ನಾಯಕ ಪ್ರಧಾನಿ ಮೋದಿ. ಇವರು ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಿರುವುದು ಸಂತಸ ತಂದಿದೆ. ಕೊಟ್ಟ ಮಾತಿನಂತೆ ಏರ್ಪೋರ್ಟ್ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದಾರೆ. ಈ ದಿನ ಬಹಳ ವೈಶಿಷ್ಟ್ಯಪೂರ್ಣವಾದದ್ದು ಮಲೆನಾಡು ಭಾಗದ ಜನರ ಕನಸು ನನಸಾಗುತ್ತಿರುವ ಶುಭ ಸಂಕೇತ. ಮೋದಿ ಆಶೀರ್ವಾದದಿಂದ ನಾಡಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಇಂತಹ ಅವಕಾಶ ನನಗೆ ಸಿಕ್ಕಿದ್ದಕ್ಕೆ ಜನರಿಗೆ ನಾನು ಋಣಿಯಾಗಿದ್ದೇನೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಮಾತಿನಂತೆ ಕೆಲಸ ಮಾಡಿದ್ದೇನೆ. ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ಒದಗಿಸಿಕೊಟ್ಟಿದ್ದೇನೆ. ಮೋದಿ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.
ಉಡುಪಿ: ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯವನ್ನು ಸದೃಢಗೊಳಿಸಬೇಕು : ಶಾಸಕ ರಘುಪತಿ ಭಟ್ – Vishwanews24
