ಶಿವಮೊಗ್ಗ : 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು – Vishwanews24
ಶಿವಮೊಗ್ಗ : 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು
10 ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಎಣ್ಣೆಕೊಪ್ಪ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿ ಜಯಂತ್ ರಜತಾದ್ರಯ್ಯ ಮೃತ ದುರ್ದೈವಿ. ಆನವಟ್ಟಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಜಯಂತ್ ಬೆಳಗ್ಗೆ ಶಾಲೆಗೆ ತೆರಳುವ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ.
ಜಯಂತ್ ಎದ್ದಿನಂತೆ ಬೆಳಗ್ಗೆ ಎದ್ದು ಇಂದು ಶಾಲೆಗೆ ಹೋಗಲು ಮನೆಯಲ್ಲಿ ರೆಡಿಯಾಗುತ್ತಿದ್ದ. ಈ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಜಯಂತ್ನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಂತ್ ಮೃತಪಟ್ಟಿದ್ದಾನೆ.
