ಶಿವಸೇನೆ ಇಲ್ಲಾಂದ್ರೆ ಏಕಾಂಗಿಯಾಗಿ ಹೋರಾಡಲು ಸಿದ್ಧರಾಗಿ: ಅಮಿತ್ ಶಾ ಕರೆ

Featured, ರಾಷ್ಟ್ರ ನ್ಯೂಸ್

ಮುಂಬೈ: ಶಿವಸೆನೆ ಜತೆಗೆ ಮೈತ್ರಿ ಕಷ್ಟವಾಗಿರುವ ಹಿನ್ನಲೆಯಲ್ಲಿ ತಮ್ಮ ಪಕ್ಷದ ನಾಯಕರಿಗೆ 2019 ರ ಲೋಕಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರೆಕೊಟ್ಟಿದ್ದಾರೆ.

ಶಿವಸೇನೆಯನ್ನು ನಂಬುತ್ತಾ ಕೂತರೆ ಇನ್ನು ಮಹಾರಾಷ್ಟ್ರದಲ್ಲಿ ಪ್ರಚಾರ ಕಷ್ಟ ಎಂದು ಬಿಜೆಪಿಗೆ ಈಗ ಅರಿವಾಗಿದೆ. ಅವಿಶ್ವಾಸ ಮತ ಸಂದರ್ಭದಲ್ಲಿಯೂ ಶಿವಸೇನೆ ಕೊನೆ ಕ್ಷಣದಲ್ಲಿ ಕೈ ಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಅಮಿತ್ ಶಾ ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ಕರೆ ಕೊಟ್ಟಿದ್ದಾರೆ.

ಶಿವಸೇನೆ ಬಂದರೆ ಸ್ವಾಗತ. ಇಲ್ಲವಾದರೆ ಏಕಾಂಗಿಯಾಗಿ ಆದರೂ ಸರಿಯೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೆಲಸ ಮಾಡುವಂತೆ ಅಮಿತ್ ಶಾ ಪಕ್ಷದ ನಾಯಕರಿಗೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶಿವಸೇನೆಯ ವಿರುದ್ಧ ಏಕಾಂಗಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಬೇಕು ಎಂದು ಷಾ ಕರೆ ಕೊಟ್ಟಿದ್ದಾರೆ. ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಬೇಕು, ಇದಕ್ಕಾಗಿ ಈಗಿಂದಲೇ ಸಜ್ಜಾಗಿ ಎಂದು ಅಮಿತ್ ಷಾ ಸೂಚಿಸಿದ್ದಾರೆ. ಬಿಜೆಪಿಯ ಯುವ ಕಾರ್ಯಕರ್ತರನ್ನೇ ಹೆಚ್ಚು ಟಾರ್ಗೆಟ್ ಮಾಡಿರುವ ಷಾ, ಪಕ್ಷದ ಮುಖಂಡರಲ್ಲಿ ಈ ಬಗ್ಗೆ ಹೆಚ್ಚು ಸಕ್ರೀಯರಾಗುವಂತೆ ಸೂಚಿಸಿದ್ದಾರೆ. ಇದಕ್ಕಾಗಿಯೇ ಷಾ ಒಟ್ಟು ೨೩ ಅಂಶಗಳ ಹೊಸ ಕಾರ್ಯ ಯೋಜನೆಯನ್ನು ತಯಾರಿಸಿದ್ದು ಯುವ ಕಾರ್ಯಕರ್ತರೊಂದಿಗೆ ಹಂಚಿಕೊಂಡಿದ್ದಾರೆ.!