ಶೀಘ್ರವೇ ಬರಲಿದೆ ಹೊಸ ವಿನ್ಯಾಸದ 20 ರೂ. ಹೊಸ ನೋಟು – Vishwanews24
ನವದೆಹಲಿ: ಶೀಘ್ರವೇ ನಿಮಗೆ ಹೊಸ 20 ರೂಪಾಯಿ ನೋಡಲು ಸಿಗಲಿದೆ. ಆರ್.ಬಿ.ಐ. ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಆರ್.ಬಿ.ಐ. ಹೊಸ 20 ರೂಪಾಯಿ ಬಣ್ಣ ಸೇರಿದಂತೆ ಎಲ್ಲದರ ಬಗ್ಗೆ ಮಾಹಿತಿ ನೀಡಿದೆ. ನೋಟಿನ ಬಣ್ಣ ಹಸಿರು ಮಿಶ್ರಿತ ಹಳದಿಯಾಗಿರಲಿದೆ.
ಹೊಸ 20 ರೂಪಾಯಿಯಲ್ಲಿ ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಸಹಿಯಿರಲಿದೆ. ಜೊತೆಗೆ ದೇಶದ ಸಂಸ್ಕೃತಿ ಬಿಂಬಿಸುವ ಎಲ್ಲೋರು ಗುಹೆಗಳ ಚಿತ್ರವಿರಲಿದೆ. ಮಹಾತ್ಮಾ ಗಾಂಧಿ ಸರಣಿಯ ಹೊಸ ನೋಟಿನ ಜೊತೆ ಹಳೆ 20 ರೂಪಾಯಿ ನೋಟು ಕೂಡ ಚಾಲ್ತಿಯಲ್ಲಿರಲಿದೆ ಎಂದು ಆರ್.ಬಿ.ಐ. ಹೇಳಿದೆ.
ಇನ್ನು ಈ ಹೊಸ ನೋಟು ಚಲಾವಣೆಗೆ ಬಂದ ನಂತರ ಸಹ ಹಳೆಯ 20 ರು. ನೋಟುಗಳು ಹಾಗೆಯೇ ಚಲಾವಣೆಯಲ್ಲಿರಲಿದ್ದು ಇದಕ್ಕೆ ಯಾವ ಕಾನೂನಿನ ಅಡ್ಡಿ ಇರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಹೊಸ ನೋಟಿನಲ್ಲಿ ಜ್ಯಾಮಿತಿಯ ವಿನ್ಯಾಸಗಳನ್ನು ಚಿತ್ರಿಸಲಾಗಿದ್ದು ನೋಟಿನ ಎರಡೂ ಭಾಗಗಳಲ್ಲಿ ಬೇರೆ ಬೇಈ ಮಾದರಿಯ ಚಿತ್ತಾರವಿರಲಿದೆ .
ಇದು ಮಧ್ಯದಲ್ಲಿ ಮಹಾತ್ಮ ಗಾಂಧಿಯ ಭಾವಚಿತ್ರವನ್ನು ಹೊಂದಿ ಸೂಕ್ಷ್ಮ ಅಕ್ಷರಗಳಲ್ಲಿ ‘ಆರ್ಬಿಐ’, ‘ಭಾರತ್’, ‘ಇಂಡಿಯಾ’ ಮತ್ತು ’20 ‘ ಎಂದು ಬರೆಯಲಾಗಿದೆ. ಆರ್ಬಿಐ ಲಾಂಛನದೊಂದಿಗೆ ಗವರ್ನರ್ ಸಹಿ, ಸಹ ನೋಟಿನಲ್ಲಿ ಇರಲಿದೆ. ಗಾಂಧಿ ಭಾವಚಿತ್ರದ ಬಲಭಾಗದಲ್ಲಿ – ಅಶೋಕ ಸ್ಥಂಭ, ಮತ್ತು ಎಲೆಕ್ಟ್ರಾಟೈಪ್ ನಲ್ಲಿ 20 ಎಂದು ಮುದ್ರಿಸಲಾಗಿದೆ..
