ಶೃಂಗೇರಿಯ ವಿವಾಹಿತ ಪ್ರೇಮಿಗಳು ಕುಂದಾಪುರದ ಲಾಡ್ಜ್ ನಲ್ಲಿ ಆತ್ಮಹತ್ಯೆ

Featured, ಉಡುಪಿ

ಕುಂದಾಪುರ, : ವಿವಾಹಿತರಾಗಿರುವ ಪ್ರೇಮಿಗಳಿಬ್ಬರು ಕುಂದಾಪುರದ ಲಾಡ್ಜೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಶೃಂಗೇರಿಯ ಕಳಸಪ್ಪ ಗೌಡ ಎಂಬಾತನ ಮಗ ಗುರುಮೂರ್ತಿ(43) ಹಾಗೂ ಕೊಪ್ಪದ ಜಯಪುರ ಎಂಬಲ್ಲಿಯ ನಿವಾಸಿ ಶೃಂಗೇರಿಗೆ ವಿವಾಹ ಮಾಡಿಕೊಟ್ಟಿರುವ ಗೋವಿಂದ ಎಂಬಾತನ ಪುತ್ರಿ ಶಾರದಾ(30) ಎಂದು ಗುರುತಿಸಲಾಗಿದೆ.

ಗುರುಮೂರ್ತಿ ವಿವಾಹಿತನಾಗಿದ್ದು ಆತನಿಗೆ ಇಬ್ಬರು ಮಕ್ಕಳಿದ್ದಾರೆ.ಹಾಗೂ ಶಾರದಾಳಿಗೂ ಎಂಟು ವರ್ಷದ ಓರ್ವ ಪುತ್ರಿಯಿದ್ದಾಳೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಸೆಪ್ಟಂಬರ್ ೨೬ರಂದು ಬೆಳಿಗ್ಗೆ ಕುಂದಾಪುರದ ಹೋಟೆಲ್ ಹರಿಪ್ರಸಾದ್‌ಗೆ ಬಂದಿದ್ದರು. ತಮ್ಮನ್ನು ಗಂಡ ಹೆಂಡತಿ ಎಂದು ಪರಿಚಯಿಸಿ ಗುರುಮೂರ್ತಿಯ ಚುನಾವಣಾ ಗುರುತಿನ ಚೀಟಿ ನೀಡಿ ಕೊಠಡಿ ಸಂಖ್ಯೆ 103ರಲ್ಲಿ ಉಳಿದುಕೊಂಡಿದ್ದರು.  ನಾಲ್ಕು ದಿನಕ್ಕಾಗಿ ಹರಿಪ್ರಸಾದ್ ಲಾಡ್ಜ್ ನಲ್ಲಿ ಕೊಠಡಿ ಪಡೆದಿತ್ತು. ಸುತ್ತಮುತ್ತ ಓಡಾಡಿಕೊಂಡು ಮತ್ತೆ ಬಂದು ಲಾಡ್ಜ್ ನಲ್ಲಿ ತಂಗುತ್ತಿದ್ದರು. ಆದರೆ ಕಳೆದ ರಾತ್ರಿಯಿಂದ ಕೊಠಡಿ ಬಂದ್ ಇತ್ತು. ಸಂಜೆಯವರೆಗೆ ಬಾಗಿಲು ತೆಗೆಯದ ಕಾರಣ ಲಾಡ್ಜ್ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿ, ಬಾಗಿಲು ಒಡೆದಿದ್ದಾರೆ. ಈ ಸಂದರ್ಭ ಎರಡು ಮೃತದೇಹಗಳು ಕಂಡುಬಂದಿದೆ. ಗುರುಮೂರ್ತಿ ಮೃತದೇಹ ಬೆಡ್ ಮೇಲಿದ್ದರೆ, ಶಾರದಾ ದೇಹ ಕೆಳಗೆ ಮಲಗಿದ ಸ್ಥಿತಿಯಲ್ಲಿತ್ತು.ಮದ್ಯಕ್ಕೆ ಕೀಟನಾಶಕ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರ ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಕೊಠಡಿಯೊಳಗೆ ವಿಷದ ಬಾಟಲಿ ಮತ್ತು ಮದ್ಯದ ಬಾಟಲಿ ಸಿಕ್ಕಿದೆ. ಸ್ಥಳದಲ್ಲಿ ಶಾರದಾ ಬರೆದಿರುವ ಡೆತ್ ನೋಟ್ ಸಿಕ್ಕಿದೆ. ನಮ್ಮ ಸಾವಿಗೆ ನನ್ನ ಗಂಡ ರಮೇಶ ಕಾರಣ ಅಂತ ಬರೆದುಕೊಂಡಿದ್ದಾಳೆ.

ಗುರುಮೂರ್ತಿ ಹಾಗೂ ಶಾರದಾ ಪ್ರೀತಿಗೆ, ಅಕ್ರಮ ಸಂಬಂಧಕ್ಕೆ ಶಾರದಾ ಗಂಡ ರಮೇಶ ತಡೆಯೊಡ್ಡಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಗಲಾಟೆಯಾಗಿದೆ ಅಂತ ಮೃತರ ಸಂಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಘಟನೆಯ ಕುರಿತಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ