ಶೇಕಡಾ 90 ರಷ್ಟು ಮುಸ್ಲಿಮರು ಮತದಾನ ಮಾಡಿದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ರಾಹುಲ್‌ ಗಾಂಧಿ ಅವರು ಮುಂದಿನ ಪ್ರಧಾನಿಯಾಗಲಿದ್ದಾರೆ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ :ಜಮೀರ್ -Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಚಿಕ್ಕಬಳ್ಳಾಪುರ: ಶೇಕಡಾ 50 ರಷ್ಟು ಮಾತ್ರ ಮುಸ್ಲಿಮರು ಮತದಾನ ಮಾಡುತ್ತಿದ್ದಾರೆ. ಇನ್ನುಳಿದ 50 ಶೇಕಡಾ ಮುಸ್ಲಿಂ ಬಾಂಧವರು ಮತದಾನ ಮಾಡುತ್ತಿಲ್ಲ, ಹೀಗಾಗಿ ಕಳೆದ ಬಾರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ.

ಬಾಗೇಪಲ್ಲಿಯಲ್ಲಿ  ಮಂಗಳವಾರ ಶಾದಿಮಹಲ್‌ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿರುವ ಶೇಕಡಾ 90 ರಷ್ಟು ಮುಸ್ಲಿಮರು ಮತದಾನ ಮಾಡಿದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ರಾಹುಲ್‌ ಗಾಂಧಿ ಅವರು ಮುಂದಿನ ಪ್ರಧಾನಿಯಾಗಲಿದ್ದಾರೆ. ಅದನ್ನು  ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದರು.

ಈ ಬಾರಿ ಶೇ.90ರಷ್ಟು ಮುಸ್ಲಿಂ ಬಾಂಧವರು ಮತದಾನ ಮಾಡಿದರೆ ಈ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಲ್ಲದೇ ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಮುಂದಿನ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲು ತಯಾರಾಗಿರುವ ಸಂಸದ ವೀರಪ್ಪ ಮೊಯ್ಲಿಗೆ ಅವರಿಗೆ ಮತ ನೀಡುವಂತೆ ಜಮೀರ್ ಅವರು ಚುನಾವಣಾ ಪ್ರಚಾರ ನಡೆಸಿದರು.

ಪುಲ್ವಮಾ ಉಗ್ರ ದಾಳಿ ಕುರಿತು ಮಾತನಾಡಿದ ಅವರು ಹುತಾತ್ಮ ಯೋಧರಲ್ಲಿ ಓರ್ವ ಮುಸ್ಲಿಂ ಯೋಧನೂ ಇದ್ದ. ನಾವೆಲ್ಲರೂ ಹಿಂದೂಸ್ಥಾನದವರು ಇಂತಹ ದಾಳಿಯನ್ನು ಖಂಡಿಸಬೇಕು ಎಂದರು.