ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಕಡಿತ ಆದೇಶವನ್ನು ಹಿಂಪಡೆದ ಕೇಂದ್ರ ಸರಕಾರ -Vishwanews24

Featured, ರಾಷ್ಟ್ರ ನ್ಯೂಸ್

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಕಡಿತ ಆದೇಶವನ್ನು ಹಿಂಪಡೆದ ಕೇಂದ್ರ ಸರಕಾರ -Vishwanews24

ಹೊಸದಿಲ್ಲಿ: ಬುಧವಾರ ಸಂಜೆ ಘೋಷಿಸಿದ್ದ ಸಣ್ಣ ಉಳಿತಾಯಗಳ ಯೋಜನೆಗಳ ಮೇಲಿನ ಬಡ್ಡಿದರಗಳ ಮೇಲಿನ ಭಾರೀ ಕಡಿತಯನ್ನು ಕೇಂದ್ರ ಸರಕಾರ ಇಂದು ಹಿಂದಕ್ಕೆ ಪಡೆದಿದೆ.

ಭಾರತ ಸರಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು 2020-21ರ ಕೊನೆಯ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ಅಂದರೆ 2021ರ ಹೊತ್ತಿಗೆ ಇದ್ದ ದರಗಳಲ್ಲಿ ಮುಂದುವರಿಯುತ್ತದೆ. ಕಣ್ತಪ್ಪಿನಿಂದ ಹೊರಡಿಸಲಾಗಿರುವ ಆದೇಶಗಳನ್ನು ಹಿಂಪಡೆಯಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

402 ಸಿವಿಲ್ ಪಿ.ಎಸ್.ಐ ನೇಮಕಕ್ಕೆ ಅಧಿಸೂಚನೆ ಪ್ರಕಟ-Vishwanews24

ಸಣ್ಣ ಉಳಿತಾಯ ಯೋಜನೆಗಳ ಮೇಲೆ ಬಡ್ಡಿದರ ಕಡಿತ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ನಿನ್ನೆ ಪ್ರಕಟಿಸಿತ್ತು. ಬ್ಯಾಂಕ್ ಗಳಲ್ಲಿ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರ ಕಡಿತದಂತೆಯೇ 2021-22ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಎನ್ ಎಸ್ ಸಿ ಮತ್ತು ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯಗಳ ಮೇಲೆ ಬಡ್ಡಿದರವನ್ನು ಶೇಕಡಾ 1.1ರಷ್ಟು ಕಡಿತ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ಪಿಪಿಎಫ್ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಶೇಕಡಾ 0.7ರಿಂದ 6.4ರವರೆಗೆ ಎನ್ ಎಸ್ ಸಿಯ ಬಡ್ಡಿದರವನ್ನು ಶೇಕಡಾ 0.9ರಿಂದ ಶೇಕಡಾ 5.9ರವರೆಗೆ ಕಡಿತ ಮಾಡಲಾಗಿತ್ತು.

51 ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಗೊಂಡ ಸೂಪರ್ ಸ್ಟಾರ್ ರಜನಿಕಾಂತ್ -Vishwanews24