ಸರಕಾರ ಹೇಗಾದರೂ ಮಾಡಿ ನನ್ನನ್ನು ಒಳಗೆ ಹಾಕಿ ಧ್ವನಿ ಅಡಗಿಸಲು ನೋಡುತ್ತಿದೆ: ಚಕ್ರವರ್ತಿ ಸೂಲಿಬೆಲೆ – vishwanews24
ಹಿಂದೂ ಮುಖಂಡರು, ಕಾರ್ಯಕರ್ತರನ್ನ ರಾಜ್ಯ ಕಾಂಗ್ರೆಸ್ ಸರಕಾರ ಟಾರ್ಗೆಟ್ ಮಾಡುತ್ತಿದೆ ..
ಕಾಂಗ್ರೆಸ್ ನನ್ನನ್ನ ಹೇಟ್ ಮಾಡುತ್ತದೆ ಐ ಡೋಂಟ್ ಕೇರ್ : ಚಕ್ರವರ್ತಿ ಸೂಲಿಬೆಲೆ..
ಶಿವಮೊಗ್ಗ: “ಹಿಂದೂ ಮುಖಂಡರು, ಕಾರ್ಯಕರ್ತರನ್ನ ರಾಜ್ಯ ಕಾಂಗ್ರೆಸ್ ಸರಕಾರ ಟಾರ್ಗೆಟ್ ಮಾಡುತ್ತಿದೆ” ಎಂದು ಚಕ್ರವರ್ತಿ ಸೂಲಿಬೆಲೆ ಗಂಭೀರ ಆರೋಪ ಮಾಡಿದ್ದಾರೆ.
ಬುಧವಾರ(ಜೂ11) ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ “ಕಾಂಗ್ರೆಸ್ ನನ್ನನ್ನ ಹೇಟ್ ಮಾಡುತ್ತದೆ. ನನ್ನನ್ನು ಕಂಡರೇ ಅವರಿಗೆ ಕೋಪ.ಐಜಿ- ಡಿಐಜಿಗಳು ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ಕೇಳಿದ್ದಾರೆ.2022 ರಿಂದ 2025 ರ ಜೂನ್ ವರೆಗೆ ಯಾವ್ಯಾವ ಕೇಸ್ ಗಳು ಇವೆ ಎಂದು ಮಾಹಿತಿ ಕೇಳಿದ್ದಾರೆ.ಹೇಗಾದರೂ ಮಾಡಿ, ಒಳಗೆ ಹಾಕಿ ಧ್ವನಿ ಅಡಗಿಸಲು ನೋಡುತ್ತಿದ್ದಾರೆ
ಎಂದರು.
ಉಡುಪಿ : ಅನ್ನಭಾಗ್ಯದ ಅಕ್ಕಿ ಅಕ್ರಮ ದಾಸ್ತಾನು: ಆರೋಪಿ ಬಂಧನ – vishwanews24
“ನಾನು ಇದಕ್ಕೆಲ್ಲಾ ಹೆದರುವುದಿಲ್ಲ,
ಐ ಡೋಂಟ್ ಕೇರ್, ಐ ಡೋಂಟ್ ಮೈಂಡ್ . ನೀವು ನನ್ನ ಒಳಗೆ ಹಾಕಿದರೆ ತುಂಬಾ ದಿನದಿಂದ ಓದದೇ ಇರುವ 15-20 ಪುಸ್ತಕ ಇದ್ದಾವೆ. ಅದೆಲ್ಲವನ್ನೂ ಓದಿ ಮುಗಿಸಿ ಹೊರಗೆ ಬರುತ್ತೇನೆ” ಎಂದರು.
