ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆ ನೌಕರರು ಗಮನದಲ್ಲಿಟ್ಟುಕೊಂಡು ಸಹಕಾರ ಕೊಡಬೇಕು : ಡಿ.ಕೆ.ಶಿ ಮನವಿ – vishwanews24
ಈಡೇರಿಸಲಾಗದ ಬೇಡಿಕೆಯನ್ನ ಈಡೇರಿಸಿ ಅನ್ನೋದು ಸರಿಯಲ್ಲ , ಹಠ ಮಾಡೋದು ಅರ್ಥ ಇಲ್ಲ
ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆ ನೌಕರರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಾರಿಗೆ ನೌಕರರು ಕೇಳಿರುವ ಬೇಡಿಕೆಯಲ್ಲಿ ತಪ್ಪಿಲ್ಲ. ಸಾರಿಗೆ ನೌಕರರು ಹಠ ಮಾಡೋದು ಸರಿಯಲ್ಲ. ನೌಕರರು ಸಹಕಾರ ಕೊಡಬೇಕು. ಸಾರಿಗೆ ನೌಕರರ ಜೊತೆ ಸಿಎಂ, ಸಚಿವರು ಸಭೆ ಮಾಡಿದ್ದಾರೆ. ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆ ನೌಕರರು ಗಮನದಲ್ಲಿಟ್ಟುಕೊಳ್ಳಬೇಕು. ನಾಗರಿಕರ ವಿಚಾರವನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.
ಧರ್ಮಸ್ಥಳ ಪ್ರಕರಣ : ಏಳನೇ ದಿನಕ್ಕೆ ಕಾಲಿಟ್ಟ ಎಸ್ಐಟಿಯ ಶೋಧ ಕಾರ್ಯಾಚರಣೆ – vishwanews24
ಈಡೇರಿಸಲಾಗದ ಬೇಡಿಕೆಯನ್ನ ಈಡೇರಿಸಿ ಅನ್ನೋದು ಸರಿಯಲ್ಲ. ಸಾರ್ವಜನಿಕರ ಹಿತ ಮುಖ್ಯ, ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಿ. ಹಠ ಮಾಡೋದು ಅರ್ಥ ಇಲ್ಲ. ಕೆಲವು ಸಾರಿಗೆ ನೌಕರರು ಕೆಲಸಕ್ಕೆ ಬಂದಿದ್ದಾರೆ. ಅವರಿಗೆಲ್ಲ ಅಭಿನಂದನೆ ಎಂದು ಹೇಳಿದ್ದಾರೆ.
