ಸವದತ್ತಿ ಜಾತ್ರೆಗೆ ಹೊರಟಿದ್ದ ಭಕ್ತರ ವಾಹನ ಮರಕ್ಕೆ ಡಿಕ್ಕಿ : ಆರು ಮಂದಿ ಸಾವು – Vishwanews24

Featured, ರಾಜ್ಯ ನ್ಯೂಸ್

ಸವದತ್ತಿ ಜಾತ್ರೆಗೆ ಹೊರಟಿದ್ದ ಭಕ್ತರ ವಾಹನ ಮರಕ್ಕೆ ಡಿಕ್ಕಿ : ಆರು ಮಂದಿ ಸಾವು

ಬೆಳಗಾವಿ : ಸವದತ್ತಿ ಜಾತ್ರೆಗೆ ಹೊರಟಿದ್ದ ಭಕ್ತರ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಜನ ಸಾವನಪ್ಪಿರುವ ಘಟನೆ ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಮೃತಪಟ್ಟವರೆಲ್ಲರೂ ರಾಮದುರ್ಗ ತಾಲ್ಲೂಕಿನ ಹುಲಕುಂದ ಗ್ರಾಮದವರಾಗಿದ್ದು, ಇಬ್ಬರು ಬಾಲಕಿಯರು, ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಇದ್ದಾರೆ. ಹಣಮವ್ವ ಮೇಗಾಡಿ (25), ಮಾರುತಿ (42), ಇಂದ್ರವ್ವ (24), ದೀಪಾ (31), ಸವಿತಾ (17), ಸುಪ್ರಿತಾ (11) ಮೃತಪಟ್ಟವರು.

ಉಡುಪಿ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ;  ಇಬ್ಬರ ಬಂಧನ, ಸಂತ್ರಸ್ಥೆಯ ರಕ್ಷಣೆ – Vishwanews24

ಗಾಯಾಳುಗಳನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ನಸುಕಿನ ಜಾವ ಎಲ್ಲರೂ ಗೂಡ್ಸ್‌ ವಾಹನ ಬಾಡಿಗೆ ಮಾಡಿಕೊಂಡು ಯಲ್ಲಮ್ಮನ ಗುಡ್ಡಕ್ಕೆ ರೇಣುಕಾದೇವಿ ಜಾತ್ರೆಗೆ ತೆರಳುತ್ತಿದ್ದರು. ಗ್ರಾಮದಿಂದ ಹೊರಟ ವಾಹನವು ರಾಮದುರ್ಗ ಮಾರ್ಗವಾಸಾಗಿ, ಚುಂಚನೂರು ಗ್ರಾಮದ ಸರಹದ್ದಿಗೆ ಬಂದಿತ್ತು. ವೇಗವಾಗಿ ಚಲಿಸುತ್ತಿದ್ದ ವಾಃನ ಚುಂಚನೂರು ವಿಠಲಪ್ಪನ ದೇವಸ್ಥಾನದ ಮುದಿನ ಬೃಹತ್‌ ಆಲದ ಮರಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿತು. ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಐವರು ಸ್ಥಳದಲ್ಲೇ ಮೃತಪಟ್ಟರು. ಒಬ್ಬ ಗೋಕಾಕ ತಾಲ್ಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ : ಆರೋಪಿಗಳ ಮಾಹಿತಿ ನೀಡುವವರಿಗೆ 14 ಲಕ್ಷ ರೂ. ಬಹುಮಾನ – Vishwanews24

Leave a Reply