ಸಸಿಕಾಂತ್ ಸೆಂಥಿಲ್ ವಿರುದ್ಧ ಅಕ್ರಮ ಮರಳುಗಾರಿಕೆ ಅವ್ಯವಹಾರ ಮತ್ತು ಭ್ರಷ್ಟಚಾರದ ಆರೋಪ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು :ಐಎ‌ಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ, ದ.ಕ ಲಾರಿ ಮಾಲಕರ ಸಂಘ‌ ಮತ್ತು ಮರಳು ಗುತ್ತಿಗೆದಾರ ಸಂಘ ಸಸಿಕಾಂತ್ ಸೆಂಥಿಲ್ ವಿರುದ್ದ ಗಂಭೀರ ಭ್ರಷ್ಟಾಚಾರದ ಆರೋಪವನ್ನು ಹೊರಿಸಿದರು.

ದ.ಕ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ದ, ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲಾರಿ ಮಾಲಕರ ಸಂಘದ ಅಧ್ಯಕ್ಷ ಜೈರಾಜ್ ಶೆಟ್ಟಿ, ಮರಳುಗಾರಿಕೆ ವಿಚಾರದಲ್ಲಿ ಸಸಿಕಾಂತ್ ಸೆಂಥಿಲ್ ಅವರು ಮಾಡಿರುವ ಹಗರಣಗಳ ಆರೋಪ ವ್ಯಕ್ತಪಡಿಸಿದರು.

ಮರಳು ತೆಗೆಯಲು ಒಂದೇ ಪರ್ಮಿಟ್ ಗೆ ಹಲವು ಕಡೆ ಒಪ್ಪಿಗೆ ನೀಡಲಾಗಿದ್ದು, ತುಂಬೆ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಡ್ರೆಜ್ಜಿಂಗ್ ನಲ್ಲೂ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದಿಲ್ಲಿ ಕಂಪೆನಿಗೆ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಡ್ರೆಜ್ಜಿಂಗ್ ಮಾಡಲು ಟೆಂಡರ್ ನೀಡಿದ್ದು, ಟೆಂಡರ್ ನೀಡುವ ಸಂದರ್ಭ ಯಾವುದೇ ಮಾನದಂಡ ಅನುಸರಿಸದೇ ಟೆಂಡರ್ ನಿಯಮ ಮುರಿದು ಕೊಟ್ಟಿದ್ದು ಅಲ್ಲದೆ ಈ ಬಗ್ಗೆ ಹೈ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಮರಳು ತೆಗೆಯೋದನ್ನು ಹೂಳೆತ್ತುದಾಗಿ ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ.ಈ ಕುರಿತಂತೆ ತನಿಖೆ ನಡೆಯಬೇಕು ಎಂದು ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟ ಆಗ್ರಹಿಸಿದೆ.

ಮರಳು ಲಾರಿಗಳಿಗೆ GPS ಅಳವಡಿಸಲು ಟೆಂಡರ್ ಕರೆದಿದ್ದಾರೆ. ಆದರೆ ಉಡುಪಿ ಜಿಲ್ಲೆಯಲ್ಲಿ ಬ್ಲಾಕ್ ಲೀಸ್ಟ್ ನಲ್ಲಿರುವ T4U ಎಂಬ ಕಂಪೆನಿಗೆ ಟೆಂಡರ್ ಕೊಟ್ಟಿದ್ದಾರೆ. ಅಲ್ಲದೆ ಸರಕಾರಿ ಅಧಿಕಾರಿಗಳಿಂದ ಸೀಝ್ ಆದ ಮರಳನ್ನು ಓಷಿಯನ್ ಟೆಕ್ಕಿ ಎಂಬ ಕಂಪೆನಿಗೆ ಕೊಟ್ಟಿದ್ದಾರೆ ಈ ಹಿನ್ನಲೆಯಲ್ಲಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ದ ಲೋಕಾಯುಕ್ತ ಕ್ಕೆ ದೂರು ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟ ತಿಳಿಸಿದೆ.