ಸಹಕಾರಿ ಸಚಿವ ಎಸ್ .ಟಿ ಸೋಮಶೇಖರ್ ಬ್ಲ್ಯಾಕ್ ಮೇಲ್ ತಂತ್ರಗಳಿಗೆ ಬಗ್ಗುವುದಿಲ್ಲ: ಸಹಕಾರಿ ಮುಖಂಡ ಬೆಳಪು ದೇವಿ ಪ್ರಸಾದ್ ಶೆಟ್ಟಿ vishwanews24

Featured, ಉಡುಪಿ

ಸಹಕಾರಿ ಸಚಿವ ಎಸ್ .ಟಿ ಸೋಮಶೇಖರ್ ಬ್ಲ್ಯಾಕ್ ಮೇಲ್ ತಂತ್ರಗಳಿಗೆ ಬಗ್ಗುವುದಿಲ್ಲ: ಸಹಕಾರಿ ಮುಖಂಡ ಬೆಳಪು ದೇವಿ ಪ್ರಸಾದ್ ಶೆಟ್ಟಿ

ಕಾಪು: ಉಡುಪಿಯಲ್ಲಿ ನಡೆದ ಜನಸ್ವರಾಜ್
ಸಮಾವೇಶದಲ್ಲಿ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ SCDCC ಬ್ಯಾಂಕ್ ಮತ್ತು ಎಂಎನ್ ರಾಜೇಂದ್ರ ಕುಮಾರ್ ಅವರ ಬಗ್ಗೆ ಮಾತನಾಡಿದ ಮಾತುಗಳ ಬಗ್ಗೆ ಸಹಕಾರಿ ಬೆಳಪು ದೇವಿಪ್ರಸಾದ್ ಶೆಟ್ಟಿ ಟಾಂಗ್ ನೀಡಿದ್ದಾರೆ.
ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ” ಡಾ ಎಮ್ ಎನ್ ರಾಜೇಂದ್ರ ಕುಮಾರ್ ಅವರು ಪಕ್ಷಾತೀತವಾಗಿ ಸಹಕಾರಿಗಳನ್ನು ಬೆಳೆಸಿದ್ದಾರೆ ಸಹಕಾರಿ ಕ್ಷೇತ್ರಕ್ಕೊಂದು ಕರ್ನಾಟಕ ವಿಧಾನ ಪರಿಷತ್ ನಲ್ಲಿ ಅವಕಾಶ ಸಿಗಬೇಕೆಂಬ ನೂರಾರು ಸಹಕಾರಿಗಳ ಒತ್ತಾಸೆಯ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಇದರಿಂದ ವಿಚಲಿತರಾದ ಸೋಮಶೇಖರ ಅವರು ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸಿರುವುದು ಖಂಡನೀಯ ಎಂದು ಅವರು ಹೇಳಿದರು.
ಇಂತಹ ತಂತ್ರಗಳಿಗೆ ಜಗ್ಗುವುದಿಲ್ಲ ಸಹಕಾರಿ ಸಚಿವರಾದ ಸೋಮಶೇಖರ ಅವರು ಗೊತ್ತಿದೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಹೆಸರುಗಳಿಸಿದೆ ಈ ಈ ಬ್ಯಾಂಕಿನಲ್ಲಿ ಯಾವುದಾದರೂ ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸಲಿ .ಸೋಮಶೇಖರ್ ಅವರ ಆಪ್ತ ಸಹಾಯಕ ಕಾಂಗ್ರೆಸ್ ಪಕ್ಷದಲ್ಲಿ ಮಂಡ್ಯದಲ್ಲಿ ಸ್ಪರ್ದಿಸುತ್ತಿರುವುದರಿಂದ ಅವರು ಹತಾಶರಾಗಿ ಈ ರೀತಿಯ ಹೇಳಿಕೆಯನ್ನು ನೀಡಿರುವುದು ದುರದೃಷ್ಟಕರ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಬೆಳಪು ಡಾ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.