ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ : ನೇತ್ರದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾದ ರಾಜಕುಮಾರ – Vishwanews24
ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ : ನೇತ್ರದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾದ ರಾಜಕುಮಾರ – Vishwanews24
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಂತೆ ಮೆರೆದ ಪುನೀತ್, ಇಂದಿಗೂ ಅವರ ಪಾಲಿಗೆ ‘ರಾಜಕುಮಾರ’.
ನಗುಮುಖ, ಸರಳ ವ್ಯಕ್ತಿತ್ವದಿಂದಲೇ ಎಲ್ಲರಿಗೂ ಇಷ್ಟವಾಗುತ್ತಿದ್ದ ಅಪ್ಪು, ಇಂದು ಹೃದಯಾಘಾತದಿಂದ ವಿಧಿವಶವಾಗಿದ್ದಾರೆ. ಬದುಕಿದ್ದಾಗಲೂ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಚಿಲುಮೆಯಂತಿದ್ದ ಅಪ್ಪು, ಸಾವಿನ ಬಳಿಕವೂ ಸಾರ್ಥಕತೆ ಮೆರೆದಿದ್ದಾರೆ. ನೇತ್ರದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದಾರೆ.
ತಂದೆ ಡಾ.ರಾಜ್ಕುಮಾರ್ ಅವರ ನಡೆಯನ್ನೇ ಅನುಸರಿದ ಪುನೀತ್ ನೇತ್ರದಾನ ಮಾಡುವ ಮೂಲಕ ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
