ಸಿಎಂ ಬೊಮ್ಮಾಯಿ ಸೂಚನೆ:  ನಂದಿನಿ ಹಾಲಿನ ದರ ಹೆಚ್ಚಳಕ್ಕೆ ತಾತ್ಕಾಲಿಕ ತಡೆ – Vishwanews24

Featured, ರಾಜ್ಯ ನ್ಯೂಸ್

ಸಿಎಂ ಬೊಮ್ಮಾಯಿ ಸೂಚನೆ:  ನಂದಿನಿ ಹಾಲಿನ ದರ ಹೆಚ್ಚಳಕ್ಕೆ ತಾತ್ಕಾಲಿಕ ತಡೆ

ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಡಿಡೀರ್ ತಡೆ ನೀಡಿದ್ದಾರೆ. ಹಾಲಿನ ದರ ಏರಿಕೆ ಬಗ್ಗೆ ನ. 20ರ ನಂತರ ತೀರ್ಮಾನ ಕೈಗೊಳ್ಳಲಾಗುವುದು.

ಕೆಎಂಎಫ್‌ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. .

ಘ್ರದಲ್ಲೇ ಹಾಲಿನ ದರ ಪರಿಷ್ಕರಣೆ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಕೆಎಂಎಫ್‌ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು.

ನಿರಂತರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ.. ಸುರತ್ಕಲ್‌ ಟೋಲ್‌ ರದ್ದು , ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನ – Vishwanews24

ಅದರಂತೆಯೇ ನಿನ್ನೆ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಮಹಾಮಂಡಳಿ ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್‌ ನೀಡಿತ್ತು.

ಪ್ರತಿ ಲೀಟರ್ ಹಾಲಿನ ಬೆಲೆ 3 ರೂಪಾಯಿ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದರೂ, ಹೈನುಗಾರರಿಗೆ ವರದಾನವಾಗಲಿದೆ.

ಹಾಲಿನ ದರ ಪರಿಷ್ಕರಣೆಯ ಹಣ ಸಂಪೂರ್ಣವಾಗಿ ಹೈನುಗಾರರು ಅಥವಾ ರೈತರಿಗೆ ಸಂದಾಯವಾಗಲಿದೆ.ಅಂದರೆ ಹೆಚ್ಚಳ ಮಾಡಲಾದ ದರವನ್ನು ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ನೀಡಲಾಗುವುದು ಎಂದು ಕೆಎಂಫ್​​ ಹೇಳಿಕೆ ನೀಡಿತ್ತು.

ಆದ್ರೆ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೇ ಈ ನಿರ್ಧಾರ ಕೈಗೊಂಡಿದ್ದರಿಂದ ಸಿಎಂ ತಡೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಕೆ.ಆರ್. ಮುರಳಿಕೃಷ್ಣ ನಿಧನ – Vishwanews24

Leave a Reply