ಸಿದ್ದಗಂಗಾ ಮಠದ ದಾಸೋಹಕ್ಕೆ ಚಾಲೆಂಜಿಂಗ್ ಸ್ಟಾರ್ ‘ದಾಸ’ ನ ಸಹಾಯ ಹಸ್ತ _ Vishwanews24

Featured, ರಾಜ್ಯ ನ್ಯೂಸ್, ಸಿನಿಮಾ

ಬೆಂಗಳೂರು :ಸಾಮಾನ್ಯವಾಗಿ ಸಿನಿಮಾ ತಾರೆಗಳು ತಮ್ಮ ಸಿನಿಮಾ ಬಿಡುಗಡೆ ಸಮಯದಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಮಠಕ್ಕೆ ಅಕ್ಕಿ, ಸಕ್ಕರೆ, ಬೇಳೆಯನ್ನು ದಾನ ಮಾಡಿ ಬರುತ್ತಿದ್ದರು. ಆದರೆ ಇದನ್ನು ಅವರು ಪ್ರಚಾರಕ್ಕಾಗಿ ಎಂದೂ ಬಳಸಿಕೊಂಡಿಲ್ಲ. ಸಾಕಷ್ಟು ಮಂದಿ ತಾರೆಗಳ ಈ ಅಳಿಲು ಸೇವೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತಿರುತ್ತದೆ.

ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅನ್ನ ದಾಸೋಹಕ್ಕೆ ಕೈ ಜೋಡಿಸಿದ್ದು, ಲಕ್ಷಾಂತರ ಬಡ ಮಕ್ಕಳ ಹಸಿವು ನೀಗಿಸುತ್ತಿದ್ದಾರೆ. ಮಠದ ದಾಸೋಹಕ್ಕೆ ಪ್ರತಿ ತಿಂಗಳು ಎರಡು ಕ್ವಿಂಟಾಲ್​ ಅಕ್ಕಿ, ಬೇಳೆ, ಸಕ್ಕರೆ ನೀಡಲಿದ್ದಾರೆ ಎಂದು ಸಿದ್ಧಗಂಗಾ ಮಠದ ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಈ ಬಗ್ಗೆ ನಟ ದರ್ಶನ್​ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಇದುವರೆಗೆ ದಾಸ ಮಾಡಿರುವ ಸಮಾಜ ಸೇವೆ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ.

ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕಯೋಗಿ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಸಿದ್ಧಗಂಗಾ ಮಠದ 111 ವರ್ಷಗಳ ಕಾಲ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ರಾಜಕಾರಣ, ಧರ್ಮ, ಜಾತಿಗಳನ್ನು ಮೀರಿ ಬೆಳೆದಿದ್ದರು. ನಟ ದರ್ಶನ್ ಅವರಂತೆ ನೂರಾರು ಭಕ್ತರು ಕೂಡ ಇದೀಗ ಮಠದ ಸಹಾಯಕ್ಕೆ ಮುಂದಾಗುತ್ತಿದ್ದಾರೆ.