ಸುಗ್ಗಿಯ ಕಾಲವು ಸಮೃದ್ಧಿ ಮತ್ತು ಸಂತೋಷದಿಂದ ತುಂಬಲಿ : ಕನ್ನಡದಲ್ಲೇ ಸಂಕ್ರಾಂತಿ ಶುಭ ಹಾರೈಸಿದ ಪ್ರಧಾನಿ – vishwanews24
ಸುಗ್ಗಿಯ ಕಾಲವು ಸಮೃದ್ಧಿ ಮತ್ತು ಸಂತೋಷದಿಂದ ತುಂಬಲಿ : ಕನ್ನಡದಲ್ಲೇ ಸಂಕ್ರಾಂತಿ ಶುಭ ಹಾರೈಸಿದ ಪ್ರಧಾನಿ
ಬೆಂಗಳೂರು : ಮಕರ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಮಸ್ತ ಜನತೆಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಕನ್ನಡದಲ್ಲೇ ಸಂದೇಶ ಪ್ರಕಟಿಸಿರುವ ಮೋದಿ, ‘ಸಂಕ್ರಾಂತಿಯ ಶುಭಾಶಯಗಳು. ಪವಿತ್ರ ಸಂಕ್ರಾಂತಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ. ಸುಗ್ಗಿಯ ಕಾಲವು ಸಮೃದ್ಧಿ ಮತ್ತು ಸಂತೋಷದಿಂದ ತುಂಬಲಿ ಎಂದು ಹಾರೈಸುತ್ತೇನೆ. ಮುಂಬರುವ ದಿನಗಳಲ್ಲಿ ನಿಮ್ಮ ಎಲ್ಲಾ ಆಕಾಂಕ್ಷೆಗಳು ಈಡೇರಲಿ’ ಎಂದು ಉಲ್ಲೇಖಿಸಿದ್ದಾರೆ.
ಸಾಧನೆ, ಧ್ಯಾನ ಮತ್ತು ದಾನದ ಪವಿತ್ರ ಸಂಪ್ರದಾಯದೊಂದಿಗೆ ಸಂಬಂಧ ಹೊಂದಿರುವ ಪವಿತ್ರ ಹಬ್ಬವಾದ ಮಕರ ಸಂಕ್ರಾಂತಿಯ ಶುಭಾಶಯಗಳು. ಈ ಪ್ರಕೃತಿಯ ಹಬ್ಬದಂದು, ಉತ್ತರಾಯಣ ಪರ್ವ ಕಾಲದಲ್ಲಿ ಸೂರ್ಯ ದೇವರು ನನ್ನ ದೇಶದ ಎಲ್ಲಾ ಕುಟುಂಬ ಸದಸ್ಯರಿಗೆ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮೋದಿ ಶುಭ ಹಾರೈಸಿದ್ದಾರೆ.
ಸಂಕ್ರಾಂತಿಯ ಶುಭಾಶಯಗಳು. pic.twitter.com/6F3gZT7qmD
— Narendra Modi (@narendramodi) January 15, 2024
