ಸುರತ್ಕಲ್ : ಅಲೆಗಳ ಅಬ್ಬರಕ್ಕೆ ಸಿಲುಕಿ ಯುವಕ ಸಮುದ್ರಪಾಲು – vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್ : ಅಲೆಗಳ ಅಬ್ಬರಕ್ಕೆ ಸಿಲುಕಿ ಯುವಕ ಸಮುದ್ರಪಾಲು

ಸುರತ್ಕಲ್: ಇಲ್ಲಿನ ಮುಕ್ಕ ರೆಡ್‌ ರಾಕ್ ಕಡಲ ಕಿನಾರೆಯ ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ‌.

ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ ಪ್ರಜ್ವಲ್ (21) ನೀರು ಪಾಲಾದ ಯುವಕ.

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ :  ಕರಾವಳಿ ಸೇರಿ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ  – vishwanews24

ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರ ಜೊತೆ ಇಂದು ಸಂಜೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರ ಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಪು ಮೂರನೇ ಮಾರಿಗುಡಿ ರಜತ ಗದ್ದಿಗೆ ನಿರ್ಮಾಣದ ಪೂರ್ವಭಾವಿ ಗ್ರಾಮ‌ಸಭೆ : vishwanews24

Leave a Reply