ಸುರತ್ಕಲ್ : ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಬಲೆ ತುಂಬಾ ರಾಶಿ ರಾಶಿ ಮೀನು.. ಮೀನುಗಾರರು ಫುಲ್ ಖುಷ್ – Vishwanews24
ಸುರತ್ಕಲ್ : ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಬಲೆ ತುಂಬಾ ರಾಶಿ ರಾಶಿ ಮೀನು.. ಮೀನುಗಾರರು ಫುಲ್ ಖುಷ್
ಮಂಗಳೂರು:ದಕ್ಷಿಣ ಕನ್ನಡದ ಸುರತ್ಕಲ್ ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಮೀನುಗಾರನಿಗೆ ಬಲೆ ತುಂಬಾ ರಾಶಿ ರಾಶಿ ಮೀನು ಸಿಕ್ಕಿದ್ದು ಮೀನುಗಾರರು ಫುಲ್ ಖುಷಿಯಾಗಿದ್ದಾರೆ .
ಬಲೆ ಬೀಸಿದ ಮೀನುಗಾರನಿಗೆ ಮೀನಿನ ರಾಶಿಯೇ ಸಿಕ್ಕಿದೆ. ದಡದಿಂದ ಬೀಸುವ ಕೈರಂಪೊನಿ ಬಲೆಗೆ ಮತ್ಸ್ಯ ಸಮೂಹವೇ ಬಿದ್ದಿದೆ. ಬಂಗುಡೆ, ಕೊಡ್ಡಾಯಿ, ಕಲ್ಲೂರು ಮೀನುಗಳ ಮಹಾಬೇಟೆಯಿಂದ ಮೀನುಗಾರರು ಖುಷಿಯಾಗಿದ್ದಾರೆ.
ಸುಮಾರು 400ಕ್ಕೂ ಅಧಿಕ ಕೆ.ಜಿಯ ಮೀನುಗಳು ಬಲೆಗೆ ಬಿದ್ದು ಅಚ್ಚರಿ ಮೂಡಿಸಿದೆ.

