ಸುರತ್ಕಲ್‌ ಟೋಲ್‌ಗೇಟ್ ತೆರವು :  ಕೇಕ್ ಕತ್ತರಿಸಿ ಟೋಲ್‌ ವಿರೋಧಿ ಹೋರಾಟಗಾರರ ವಿಜಯೋತ್ಸವ – Vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್‌ ಟೋಲ್‌ಗೇಟ್ ತೆರವು :  ಕೇಕ್ ಕತ್ತರಿಸಿ ಟೋಲ್‌ ವಿರೋಧಿ ಹೋರಾಟಗಾರರ ವಿಜಯೋತ್ಸವ

ಮಂಗಳೂರು: ವಿವಾದಾತ್ಮಕವಾಗಿದ್ದ ಸುರತ್ಕಲ್‌ ಎನ್‌ಐಟಿಕೆ ಟೋಲ್‌ಗೇಟ್‌ ಡಿಸೆಂಬರ್ 1ರಿಂದ ರದ್ದುಗೊಂಡಿದ್ದು, ಇಂದಿನಿಂದ ಮುಕ್ತ ಸಂಚಾರ ಶುರುವಾಗಿದೆ. ಕಳೆದ 35 ದಿನಗಳ ಹೋರಾಟ ಅಂತ್ಯಕಂಡಿದ್ದು, ಇದು ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ವಿರೋಧಿ ಹೋರಾಟಗಾರರಿಗೆ ಸಂದ ಗೆಲುವು ಆಗಿದೆ ಎಂದು ಹೋರಾಟಗಾರರು ನಿನ್ನೆ ರಾತ್ರಿಯೇ ಟೋಲ್‌ಗೇಟ್ ಬಳಿ ವಿಜಯೋತ್ಸವವನ್ನು ಆಚರಿಸಿದ್ದಾರೆ.

ಎನ್ಐಟಿಕೆ ಟೋಲ್ ಗೇಟ್ ನಲ್ಲಿ ನವೆಂಬರ್ 30ರಂದು ಮಧ್ಯರಾತ್ರಿಯಿಂದ ಟೋಲ್ ಶುಲ್ಕ ಸಂಗ್ರಹ ನಿಲ್ಲಿಸಿದ್ದು, ಇದು ಹೋರಾಟಕ್ಕೆ ಸಿಕ್ಕಿದ ಜಯ ಎಂದು ಹೋರಾಟ ಸಮಿತಿಯ ಮುಖಂಡರು ತಿಳಿಸಿದ್ದಾರೆ. ಟೋಲ್ ಗೇಟ್‌ನಲ್ಲಿ ಟೋಲ್ ಸಂಗ್ರಹ ನಿಲ್ಲಿಸಿದ ಕ್ಷಣವೇ ಹೋರಾಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು.

BREAKING NEWS – ಕೇಂದ್ರದ ಸುತ್ತೋಲೆ ಪ್ರಕಾರ ಸುರತ್ಕಲ್ ಟೋಲ್ ಸಂಗ್ರಹ ಹೆಜಮಾಡಿಯಲ್ಲಿ ಸಂಗ್ರಹ ಮಾಡುವುದು ಫಿಕ್ಸ್- ಆದರೆ ಸಂಗ್ರಹ ದಿನ ನಿಗದಿಯಾಗಿಲ್ಲ : ಉಡುಪಿ ಜಿಲ್ಲಾಧಿಕಾರಿ : vishwanews24

ಹೋರಾಟ ಸಮಿತಿಯ ಮುಖಂಡರು ಕೇಕ್ ಗಳನ್ನು ಕತ್ತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಹೋರಾಟ ಸಮಿತಿಯ ಮುಖಂಡರು, ಕಾರ್ಯಕರ್ತರು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಕೇಕ್‌ ಕತ್ತರಿಸುವ ಮೂಲಕ ಸಂಭ್ರಮಾಚರಣೆ ನಡೆಯಿತು. ಸಂಭ್ರಮಾಚರಣೆಯ ವೇಳೆ ಹೋರಾಟ ಸಮಿತಿಗೆ‌ ಜಯಘೋಷಗಳನ್ನು ಕೂಗಿದರು.

ಚೆಂಡೆಯ ವಾದನ, ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು, ಟೋಲ್ ಗೇಟ್ ಬಳಿ ಹಾಕಲಾಗಿದ್ದ ಧರಣಿ‌ ಮಂಟಪದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹಾಗೂ ಮಾಜಿ ಶಾಸಕ ಮೊಯ್ದೀನ್‌ ಬಾವ ಅವರನ್ನು ಎತ್ತಿ ಸಂಭ್ರಮಿಸಿದರು.

ಸಂಭ್ರಮಾಚರಣೆಯ ವೇಳೆ ಹೋರಾಟ ಸಮಿತಿಗೆ‌ ಜಯಘೋಷಗಳನ್ನು ಕೂಗಿದರು. ಚಂಡೆಯ ವಾದನ, ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು, ಟೋಲ್ ಗೇಟ್ ಬಳಿ ಹಾಕಲಾಗಿದ್ದ ಧರಣಿ‌ ಮಂಟಪದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೊತೆಗೆ ಅವಿಭಜಿತ ದ.ಕ. ಜಿಲ್ಲೆಯ ಸಂಸದರು, ಶಾಸಕರಿಗೆ ದಿಕ್ಕಾರ ಕೂಗಿದರು.

ಮಂಗಳೂರು : ಮದುವೆ ದಿಬ್ಬಣದ ಬಸ್ಸಿಗೆ ಕಾರು ಡಿಕ್ಕಿ ; ಅದೃಷ್ಟವಶಾತ್‌ ಪ್ರಯಾಣಿಕರು ಪಾರು – Vishwanews24

Leave a Reply