ಸುರತ್ಕಲ್ ಟೋಲ್ ಗೇಟ್ ಪ್ರತಿಭಟನೆ : ಟೋಲ್ ಪ್ಲಾಜಾ ಮೇಲೇರಿ ಮಿಥುನ್ ರೈ ಆಕ್ರೋಶ – Vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್ ಟೋಲ್ ಗೇಟ್ ಪ್ರತಿಭಟನೆ : ಟೋಲ್ ಪ್ಲಾಜಾ ಮೇಲೇರಿ ಮಿಥುನ್ ರೈ ಆಕ್ರೋಶ

ದಕ್ಷಿಣ ಕ್ನನಡ: ಜಿಲ್ಲೆಯ ಮಂಗಳೂರಿನ ಸುರತ್ಕಲ್ ಟೋಲ್ ತೆರವು ಆಗ್ರಹಿಸಿ ಟೋಲ್ ವಿರೋಧಿ ಸಮಿತಿ ವತಿಯಿಂದ ಪ್ರತಿಭಟನೆಯ ಭಾರೀ ಹೈಡ್ರಾಮಾ ಸೃಷ್ಟಿಯಾಗುತ್ತಿದೆ. ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರು ಟೋಲ್ ಪ್ಲಾಜಾಗೆ ನುಗ್ಗಿದ್ದರು.

ನ್ನೊಂದೆಡೆ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಟೋಲ್ ಪ್ಲಾಜಾ ಮೇಲೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕಾರ್ಯಕರ್ತರು ಟೋಲ್ ಸಂಗ್ರಹ ವಸ್ತುಗಳನ್ನು ಪುಡಿಮಾಡಲು ಮುಂದಾದರು.ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಇದೇ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತಳ್ಳಾಟ ನಡೆಸಲಾಯಿತು.

ಬ್ಯಾರಿಕೇಡ್ ಕಿತ್ತೆಸೆದು, ಟೋಲ್‍ಗೆ ಮುತ್ತಿಗೆ ಹಾಕಿದ 500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಕಾಂಗ್ರೆಸ್ ಮುಖಂಡರಾದ ಐವಾನ್ ಡಿಸೋಜ, ಮೊಯಿದ್ದೀನ್‍ಬಾವ, ಜೆ.ಆರ್ ಲೋಬೋ, ಮಿಥುನ್ ರೈ ಸೇರಿ ಹಲವರ ಬಂಧಿಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಟೋಲ್ ಸುತ್ತ ಭಾರೀ ಪೊಲೀಸ್ ಭದ್ರತೆ ಕೈಗೊಳಲಾಗಿದ್ದು, 6 ಕೆಎಸ್‍ಆರ್ ಪಿ, 5 ಸಿಎಆರ್, 250 ಸಿವಿಲ್, 4 ಎಸಿಪಿ, 15 ಇನ್ಸ್ ಪೆಕ್ಟರ್ ಸೇರಿದಂತೆ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

REAKING – ಕೇದಾರನಾಥ ಬಳಿ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ.. 6 ಜನರು ದುರ್ಮರಣ – Vishwanews24

Leave a Reply