ಸುರತ್ಕಲ್: ಟೋಲ್ ಗೇಟ್ ವಿರುದ್ಧ ಅ. 18 ರಂದು ಐತಿಹಾಸಿಕ ಹೋರಾಟ ; ಮಹತ್ವದ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕು – ಶಾಸಕ ಮೊಯ್ದಿನ್ ಬಾವಾ ಕರೆ – Vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್: ಟೋಲ್ ಗೇಟ್ ವಿರುದ್ಧ ಅ. 18 ರಂದು ಐತಿಹಾಸಿಕ ಹೋರಾಟ ; ಮಹತ್ವದ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕು – ಶಾಸಕ ಮೊಯ್ದಿನ್ ಬಾವಾ ಕರೆ

ಸುರತ್ಕಲ್: ಟೋಲ್ ಗೇಟ್ ತೆರವಿಗಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆ ಐತಿಹಾಸಿಕ ಹೋರಾಟವಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಕರಾವಳಿ ಜಿಲ್ಲೆಗಳ ಜನರಲ್ಲಿ ಬಿಜೆಪಿ ಸರಕಾರದ ದುರಾಡಳಿತದ ವಿರುದ್ದ ಮಡುಗಟ್ಟಿರುವ ಆಕ್ರೋಶ ಅಕ್ಟೋಬರ್ 18 ರಂದು ಟೋಲ್ ಗೇಟ್ ಮುಂಭಾಗ ಪ್ರದರ್ಶನಗೊಳ್ಳಲಿದೆ. ಗುರುಪುರ ಪ್ರದೇಶದ ಜನತೆ ಶಾಂತಿಯುತವಾಗಿ ನಡೆಯಲಿರುವ ಈ ಮಹತ್ವದ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಕರೆ ನೀಡಿದರು.

ಉಚ್ಚಿಲ ದಸರಾಗೆ ವೈಭವದ ತೆರೆ – Vishwanews24

ಅವರು ಕೈಕಂಬ ಪ್ರೀಮಿಯರ್ ಸಭಾಂಗಣದಲ್ಲಿ ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದ ಯಶಸ್ಸಿಗಾಗಿ ಹಮ್ಮಿಕೊಳ್ಳಲಾಗಿದ್ದ ಗುರುಪುರ ವಲಯ ಮಟ್ಟದ ಸಮಾನ ಮನಸ್ಕ ಸಂಘಟನೆಗಳ ಸಮಾಲೋಚನಾ ಸಭೆ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

Leave a Reply