ಸುರತ್ಕಲ್: ಬೈಕ್ ಗಳ ನಡುವೆ  ಅಪಘಾತ ; ಸವಾರ ಸಾವು – vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್: ಬೈಕ್ ಗಳ ನಡುವೆ  ಅಪಘಾತ ; ಸವಾರ ಸಾವು

ಸುರತ್ಕಲ್ : ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿ, ಹಲವರಿಗೆ ಗಾಯವಾದ ಘಟನೆ ಸುರತ್ಕಲ್ – ಎಂಆರ್ ಪಿಎಲ್ ರಸ್ತೆಯ ಕಾನ ಕಟ್ಲ ಸೀತಾ ಕಾಂಪೌಂ ಡ್ ಬಳಿಯ ಮಿಲ್ಕ್ ಪಾರ್ಲರ್ ಸಮೀಪ ಭಾನುವಾರ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.

ಕಾನ ಗಣೇಶ್ ಬೀಡಿ ಸಮೀಪದ ನಿವಾಸಿ ಯಶೋಧರ (23) ಮೃತ ದುರ್ದೈವಿ.

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಂಕಿ ಅವಘಡ : 13 ಮಂದಿಗೆ ಗಾಯ – Vishwanews24

ಘಟನೆಯಲ್ಲಿ ಮೃತಪಟ್ಟವರ ಬೈಕ್ ನ ಹಿಂಬದಿ ಸವಾರ ಕಾನ ಕಟ್ಟೆ ಬಳಿಯ ನಿವಾಸಿ ಕಿಶೋರ್(18) ಅವರಿಗೆ ಗಾಯವಾಗಿದೆ. ಜೊತೆಗೆ ಇನ್ನೊಂದು ವಾಹನದಲ್ಲಿ ಸಂಚರಿಸುತ್ತಿದ್ದ ಕೇರಳ ನಿವಾಸಿಗಳು ಹಾಗೂ ಮುಕ್ಕ ಕಾಲೇಜೊಂದರ ವಿದ್ಯಾರ್ಥಿಗಳಾದ ಅಮನ್(21), ಮುಹಮ್ಮದ್ ಆದಿಲ್(21), ಮುಹಮ್ಮದ್ ತಫಾದ್(21) ಎಂಬವರಿಗೆ ಗಾಯಗಳಾಗಿವೆ.

ಇನ್ನು ಗಾಯಾಳುಗಳನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮೃತ ಯಶೋಧರ ಹಾಗೂ ಕಿಶೋರ್ ಅವರು ಲೈಟಿಂಗ್ ಕೆಲಸ ಮುಗಿಸಿ ಬರುತ್ತಿದ್ದರು. ಇವರಿಬ್ಬರು ಸಂಚರಿಸುತ್ತಿದ್ದ ಬೈಕ್ ಗೆ ಒಂದೇ ಬೈಕ್ ನಲ್ಲಿ ಮೂವರು ಸಂಚರಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಕುಂದಾಪುರ: ಅಪಾರ್ಟ್‌ಮೆಂಟ್ ಮಹಡಿಯಿಂದ ಅಯಾತಪ್ಪಿ ಬಿದ್ದು ಮಹಿಳೆ ಮೃತ್ಯು – Vishwanews24

Leave a Reply