ಸುರತ್ಕಲ್ :  ಮನೆಗೆ ಅರ್ಜೆಂಟ್ ಕಾಲ್ ಮಾಡಬೇಕೆಂದು ಮೊಬೈಲ್ ಪಡೆದ ಅಪರಿಚಿತ ವ್ಯಕ್ತಿ ಮೊಬೈಲ್ ಜೊತೆ ಎಸ್ಕೇಪ್ – vishwanews24

Featured, ದಕ್ಷಿಣ ಕನ್ನಡ

ಸುರತ್ಕಲ್ :  ಮನೆಗೆ ಅರ್ಜೆಂಟ್ ಕಾಲ್ ಮಾಡಬೇಕೆಂದು ಮೊಬೈಲ್ ಪಡೆದ ಅಪರಿಚಿತ ವ್ಯಕ್ತಿ ಮೊಬೈಲ್ ಜೊತೆ ಎಸ್ಕೇಪ್

ಸುರತ್ಕಲ್ : ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಅರ್ಜೆಂಟ್ ಕಾಲ್ ಮಾಡಬೇಕೆಂದು ವ್ಯಕ್ತಿಯೊಬ್ಬರಿಂದ ಮೊಬೈಲ್ ಪಡೆದು ಬಳಿಕ ಮೊಬೈಲ್ ಜೊತೆ ಪರಾರಿಯಾದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ಸುರತ್ಕಲ್ ನಗರದಲ್ಲಿ ಮನೆಮನೆಗೆ ಪೇಪರ್ ಹಾಕುವ ಮೊಹಮ್ಮದ್ ಇಕ್ಬಾಲ್ ಅವರು ನವೆಂಬರ್ 17 ರಂದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಸುರತ್ಕಲ್ ನಗರದ ಕೆನರಾಬ್ಯಾಂಕ್ ವೃತ್ತದಲ್ಲಿ ದಿನಪತ್ರಿಕೆಗಳಿಗೆ ಅವುಗಳಿಗೆ ಸಂಬಂಧಿಸಿದ ಪುರವಣಿಗಳನ್ನು ಜೋಡಿಸುತ್ತಿದ್ದರು. ಅಷ್ಟರಲ್ಲಿ ಸ್ಕೂಟರ್ ನಲ್ಲಿ ಆಗಮಿಸಿದ ಅಪರಿತನೊಬ್ಬ , ಮನೆಗೆ ಅರ್ಜೆಂಟಾಗಿ ಫೋನ್ ಮಾಡಬೇಕು. ದಯವಿಟ್ಟು ಸ್ವಲ್ಪ ಫೋನ್ ಕೊಡ್ತೀರಾ. ನಾನು ನನ್ನ ಪರ್ಸ್ ಹಾಗೂ ಮೊಬೈಲನ್ನು ಮನೆಯಲ್ಲೇ ಬಿಟ್ಟುಬಂದಿದ್ದೇನೆ ಎಂದು ಹೇಳಿದ್ದಾನೆ.

ಪ್ರಧಾನಿ ಮೋದಿ ಅವರ ಉಡುಪಿ ಭೇಟಿ ಇನ್ನೂ ದೃಢಪಟ್ಟಿಲ್ಲ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. – vishwanews24

ಅನುಮಾನಗೊಂಡ ಇಕ್ಬಾಲ್, ಆತನಿಗೆ ಮೊಬೈಲ್ ಕೊಟ್ಟಿಲ್ಲ. ಆದರೂ, ಆತ ಪದ ಪದೇ ಮೊಬೈಲ್ ಕೊಡುವಂತೆ ಅಂಗಲಾಚಿ ಬೇಡಿಕೊಂಡಿದ್ದಾನೆ. ಕಡೆಗೆ ಮಾನವೀಯ ದೃಷ್ಟಿಯಿಂದ ಮನಸ್ಸು ಬದಲಾಯಿಸಿಕೊಂಡ ಇಕ್ಬಾಲ್ ಅವರು ತಮ್ಮಲ್ಲಿದ್ದ ಮೊಬೈಲನ್ನು ಆತನ ಕೈಗೆ ಕೊಟ್ಟಿದ್ದಾನೆ. ಅಷ್ಟೇ.. ಮೊಬೈಲ್ ಇಸ್ಕೊಂಡವನು ಹಾಗೇ ತನ್ನ ಮನೆಗೆ ಡಯಲ್ ಮಾಡುವಂತೆ ನಾಟಕವಾಡಿ ಕೂಡಲೇ ಆನ್ ನಲ್ಲೇ ಇದ್ದ ಸ್ಕೂಟಿಯಲ್ಲಿ ಕಾಲ್ಕಿತ್ತಿದ್ದಾನೆ.

ಕೂಡಲೇ ಇಕ್ಬಾಲ್ ಅವರು ರಸ್ತೆಗಿಳಿದು ಆತನನ್ನು ಬೆನ್ನಟ್ಟಿದ್ದಾರೆ. ಆದರೂ, ಸ್ಕೂಟಿಯಲ್ಲಿ ವೇಗವಾಗಿ ಓಡಿದ ಅವರು, ಸಮೀಪದ ಒಳರಸ್ತೆಯಲ್ಲಿ ಸ್ಕೂಟಿ ನುಗ್ಗಿಸಿಕೊಂಡು ಪರಾರಿಯಾಗಿದ್ದಾನೆ. ಅದೇ ಒಳರಸ್ತೆಯಲ್ಲಿ ಇಕ್ಪಾಲ್ ಕೂಡ ನುಗ್ಗಿ ಹೋದರಾದರೂ ಆತ ಕೈಯ್ಯಿಗೆ ಸಿಕ್ಕಿಲ್ಲ. ಅಂದಾಜು 27 ಸಾವಿರ ರೂ. ಮುಖಬೆಲೆಯ ಮೊಬೈಲನ್ನು ಹೀಗೆ ಎಗರಿಸಿಕೊಂಡು ಹೋಗಿದ್ದಾನೆ ಆತ. ಇಕ್ಬಾಲ್ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಧಾನ ಪರಿಷತ್ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿ ಮಂಜುನಾಥ ಭಂಡಾರಿ ನೇಮಕ – vishwanews24

Leave a Reply